ರೈತಸಂಘ ಖಂಡನೆ
ಶಿವಮೊಗ್ಗ: ಭದ್ರಾವತಿಯ ಬಂಡಿಗುಡ್ಡದ ಬದನೆಹಾಳ್ (ಬಳ್ಳಿಗೆರೆ)ಯ ಅರಣ್ಯ ಭೂಮಿ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸಿದೆ.
ಸರ್ವೆ ನಂಬರ್ 35ರಲ್ಲಿ ಸುಮಾರು 50 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಬುಲ್ಡೋಜರ್ ಹಾಗೂ ಜೆಸಿಬಿಗಳನ್ನು ತಂದು ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದೆ. ಅಲ್ಲದೇ, ಇದನ್ನು ಪ್ರತಿಭಟಿಸಿದ ಮಹಿಳೆಯರು ಸೇರಿದಂತೆ ಸುಮಾರು 61 ರೈತರನ್ನು ಬಂಧಿಸಲಾಗಿದೆ. ಈ ಕೂಡಲೇ ಬಂಧಿತ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರ ರೈತರ ಕಷ್ಟ ಅರಿತು ಗ್ರಾಮವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಹಕ್ಕುಪತ್ರ ಹೊಂದಿರುವ ರೈತರಿಗೆ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕೊಡಬೇಕು ಎಂದು ಸಂಘದ ಜಿಲ್ಲಾ ಸಂಚಾಲಕ ಶಿವಶಂಕರ್ ತಿಳಿಸಿದ್ದಾರೆ.
--