15ರಿಂದ ಕ್ರಿಕೆಟ್ ತರಬೇತಿ ಶಿಬಿರ
ಕ.ಪ್ರ ವಾರ್ತೆ, ಭದ್ರಾವತಿ, ಏ.13
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಹಾಗೂ ನ್ಯೂಟೌನ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ 19 ವರ್ಷ ಮತ್ತು 16 ವರ್ಷ ವಯೋವುತಿಯೊಳಗಿನ ಬಾಲಕರಿಗೆ ಏ.15ರಿಂದ ಎರಡು ತಿಂಗಳ ಕಾಲ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ನ್ಯೂಟೌನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಎಲ್. ಆನಂದರಾಮನ್ ಹಾಗೂ ವಿಐಎಸ್‌ಎಲ್ ಕ್ರೀಡಾ ಇಲಾಖೆ ಪ್ರಬಂಧಕ ಎಚ್.ಜಿ. ಮಂಜುನಾಥ್ ತಿಳಿಸಿದ್ದಾರೆ. ಏ.15ರಿಂದ ಮೇ 14ರವರೆಗೆ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ 5 ದಿನ ಸಂಜೆ 4.30ರಿಂದ 6.30ರವರೆಗೆ ಶಿಬಿರ ನಡೆಯುವುದು. 500 ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾನ್ಯತೆ ಪಡೆದ ತರಬೇತುದಾರರು ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವರು. ಪ್ರವೇಶ ಶುಲ್ಕವನ್ನು ಏ.15ರಂದು ಸಂಜೆ 4.30ಕ್ಕೆ ತರಬೇತುದಾರ ಆನಂದರಾಮನ್ ಅವರಲ್ಲಿ ನೀಡಿ ರಸೀದಿ ಪಡೆಯಬಹುದಾಗಿದೆ. ಕಿಟ್ ತರಬೇಕು. ಭರ್ತಿ ಮಾಡಿದ ಪ್ರವೇಶಪತ್ರಗಳನ್ನು ಏ.16ರಂದು ಸಲ್ಲಿಸಲು ತಿಳಿಸಿದ್ದಾರೆ.