ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಾಜಕೀಯ ಪ್ರೇರಿತ ನೋಟಿಸ್

Mainashree
Updated On : 14 Apr 2013, 12:54 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಏ.13
ವಿಪ್ರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದೇನೆಂದು ಆರೋಪಿಸಿ ಕೇಂದ್ರ ಚುನಾವಣಾ ಆಯೋಗ ನೀಡಿರುವ ನೋಟಿಸ್ ದುರುದ್ದೇಶಪೂರ್ವಕವಾಗಿದ್ದು, ಇದರಲ್ಲಿ ರಾಜಕಾರಣ ಅಡಗಿದೆ ಎಂದು ಉಪಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು ಏ.10ರಂದು. ಈ ಕಾರ್ಯಕ್ರಮ ನಡೆದಿರುವುದು ಏ.9ರಂದು. ಹೈಕೋರ್ಟ್ ತೀರ್ಪಿನ ಪ್ರಕಾರ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ. ಹಾಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಈ ತೀರ್ಪಿನ ಸಹಿತ ಉತ್ತರಿಸುತ್ತೇನೆ. ದೂರು ನೀಡಿದವರು ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇದು ದುರುದ್ದೇಶಪೂರ್ವಕವಾಗಿ ಮಾಡಿದ ತಂತ್ರ ಎಂದರು.
ಕೋರ್ಟ್‌ನಲ್ಲಿಯೇ ಹೇಳುತ್ತೇನೆ: ಖಾಸಗಿ ಕಾರ್ಯಕ್ರಮದಲ್ಲಿ ಸಮಾಜದ ಜಾಗೃತಿಗಾಗಿ ನಾನು ಅಂಥ ಮಾತುಗಳನ್ನಾಡಿದ್ದೇನೆ. ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆಯೋ, ಇಲ್ಲವೋ ಎಂಬುದು ಹಾಗೂ ನಾನು ಆಡಿದ ಮಾತುಗಳ ಅರ್ಥವೇನು ಎಂಬುದರ ಪೂರ್ಣ ವಿವರನ್ನು ಕೋರ್ಟ್‌ನಲ್ಲಿಯೇ ಹೇಳುತ್ತೇನೆ. ಇದು ರಾಜಕೀಯ ತಂತ್ರ. ಯಾರೂ ಗಾಬರಿಯಾಗುವುದು ಬೇಡ. ಏನೂ ಆಗುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement