ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಬಂಧ ವೃದ್ಧಿಗೆ ವಿದ್ಯಾರ್ಥಿ ಸಂಘ ಸಹಕಾರಿ

Vishwanath S
Updated On : 14 Apr 2013, 1:00 am

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.13
 ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳ ಸಂಘದ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ಬಿ.ವೈ. ರಾಘವೇಂದ್ರ, ಹಳೆ ವಿದ್ಯಾರ್ಥಿ ಸಂಘಗಳು ಮಾನವೀಯ ಸಂಬಂಧ ಬೆಸೆಯಲು ಸಹಕಾರಿಯಾಗಿವೆ. ಹಳೆ ವಿದ್ಯಾರ್ಥಿಗಳು ಈ ರೀತಿಯ ಸಮಾರಂಭದಲ್ಲಿ ಪಾಲ್ಗೊಳ್ಳುವುದರಿಂದ ಸ್ನೇಹ, ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತವೆ ಎಂದರು.
ಅರಿವು ಮೂಡಿಸಲು ಸಹಕಾರಿ: ತಮ್ಮಲ್ಲಿರುವ ಪ್ರತಿಭೆ, ಕೌಶಲ್ಯ ಹಂಚಿಕೊಳ್ಳಲು ಹಾಗೂ ಕಾರ್ಪೊರೇಟಟ್ಜಗತ್ತಿನಲ್ಲಿ  ಅವಶ್ಯವಿರುವ ತಂತ್ರಜ್ಞಾನಗಳ ಬಗ್ಗೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸಂಘಗಳು ಸಹಕಾರಿಯಾಗುತ್ತವೆ ಎಂದ ಅವರು, ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಹಾಗೂ ಸೌಕರ್ಯ ಒದಗಿಸಲು ನಿಮ್ಮ ಸಲಹೆ ಹಾಗೂ ಸಹಕಾರ ಅವಶ್ಯವಿದೆ ಎಂದರು.
 ಕಾಲೇಜು ಪ್ರಾಂಶುಪಾಲ ಡಾ. ಸುರೇಶ್ಟಂದ್ರ ಮಾತನಾಡಿ, ಹಳೆ ವಿದ್ಯಾರ್ಥಿಗಳು ಈ ಸಂಸ್ಥೆ ಬಗ್ಗೆ ಇರುವ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಷಯಗಳನ್ನು ಹಂಚಿಕೊಂಡಾಗ ಸಂಸ್ಥೆಯಲ್ಲಿರುವ ಲೋಪದೋಷ  ಸರಿಪಡಿಸಿಕೊಳ್ಳಬಹುದು. ಹಾಗೆಯೇ ನಿಮ್ಮ ಅನುಭವಗಳನ್ನು ಕಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಸಲಹೆ ಸೂಚನೆ ನೀಡಿ, ಶೈಕ್ಷಣಿಕವಾಗಿ ಉತ್ತೇಜಿಸಬೇಕು ಎಂದರು.
 ಈ ವೇಳೆ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ನೆನಪಿಗಾಗಿ ಕೆಲವು ಸಸಿಗಳನ್ನು ನೆಡಲಾಯಿತು.
  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್. ಮಂಜುನಾಥ್, ಇಇಇ ವಿಭಾಗದ ಮುಖ್ಯಸ್ಥ ಅನಂತಪದ್ಮನಾಭ, ಐಎಸ್‌ಇ ವಿಭಾಗದ ಮುಖ್ಯಸ್ಥ ಜಿ. ಪ್ರಸಾದ್, ಇಸಿಎ ವಿಭಾಗದ ಮುಖ್ಯಸ್ಥ ಡಾ. ರವಿ ಎಂ. ಯಡೆಹಳ್ಳಿ ಹಾಗೂ ವಿಭಾಗಗಳ ಬೋಧಕ, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement