ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ಗೆ ಸೇರ್ಪಡೆ
ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಾರದಾ ಪೂರ್ಯನಾಯ್ಕ್ ಅವರನ್ನು ಬೆಂಬಲಿಸಿ ಗ್ರಾಮಾಂತರ ಭಾಗದ ಬಿಜೆಪಿ, ಕಾಂಗ್ರೆಸ್ ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾದರು. ಶಾರದಾ ಪೂರ್ಯನಾಯ್ಕ್ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖಂಡ ರೇಣುಕಪ್ಪ, ಮಂಜುನಾಥ್, ರವಿ, ನಾಗರಾಜ್, ಶಿವಲಿಂಗಪ್ಪ, ಮುರುಗ, ಶಶಿ, ರಾಮು, ಮಂಜು, ಹಾಲೇಶ್, ರವಿಕುಮಾರ್, ವಸಂತ್ ಮತ್ತಿತರರು ಜೆಡಿಎಸ್ಗೆ ಅಧಿಕೃತವಾಗಿ ಸೇರ್ಪಡೆಯಾದರು.