ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

18ರಿಂದ ಉದ್ದಾಂಜನೇಯ ಸ್ವಾಮಿ ಜಾತ್ರೆ

Lingaraj Badiger
Updated On : 16 Apr 2013, 10:44 am

ಭದ್ರಾವತಿ: ಇಲ್ಲಿನ ಗ್ರಾಮಾಂತರ ಭಾಗವಾದ ಗಂಗೂರು ಸಮೀಪದಲ್ಲಿರುವ ಸುಮಾರು 800 ವರ್ಷದ ಇತಿಹಾಸವಿರುವ ಉದ್ದಾಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ಏ. 18 ರಿಂದ 20ರವರೆಗೆ ನಡೆಯಲಿದೆ. ಜಾತ್ರೆ ಸಂದರ್ಭದಲ್ಲಿ ದೇವರಿಗೆ ವಿವಿಧ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 18 ಹಾಗೂ 19 ರಂದು ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಹೋಮ ಹವನಗಳು ನಡೆಯಲಿದ್ದು, 20 ರಂದು ಆಶ್ಲೇಷಾಬಲಿ ನಡೆಯಲಿದೆ. ಹೋಮ ಹವನಗಳ ನೇತೃತ್ವವನ್ನು ಅಶೋಕ ಗಣಪತಿ ಶರ್ಮ ಅವರು ವಹಿಸಲಿದ್ದಾರೆ. ರಾಜ್ಯಾದ್ಯಂತ ಭಕ್ತರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಎಲ್‌ಜೆಪಿ ಅಭ್ಯರ್ಥಿಪಟ್ಟಿ ಪ್ರಕಟ
ಶಿವಮೊಗ್ಗ: ಲೋಕಜನಶಕ್ತಿ ಪಾರ್ಟಿ (ಎಲ್‌ಜೆಪಿ) ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಬಿ.ಆರ್. ಕರಿಬಸಪ್ಪ, ತೀರ್ಥಹಳ್ಳಿ ಕ್ಷೇತ್ರದಿಂದ ವಕೀಲ ಎನ್. ಚಂದ್ರಶೇಖರಪ್ಪ ಕಣಕ್ಕಿಳಿಯಲಿದ್ದಾರೆ. ಇವರು ಏ.17ರಂದು ನಾಮ ಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ಶರಫೆ ಹಾಗೂ ರಾಜ್ಯಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ, ಕಾರ್ಯದರ್ಶಿ ಎಚ್.ಎಂ. ರಮೇಶ್ ಹುಲ್ಲಾನೆ ತಿಳಿಸಿದ್ದಾರೆ.
24ರಂದು ಸಾಮೂಹಿಕ ವಿವಾಹ
ಶಿವಮೊಗ್ಗ: ಭದ್ರಾವತಿಯ ಶ್ರೀ ಗುಡ್ಡದ ಕೆಂಚಮ್ಮ ಹಾಗೂ ಶ್ರೀ ಮಾತಂಗಮ್ಮ ಶ್ರೀ ಗವಿಸಿದ್ದೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಏ.24ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾನ್ನಿಧ್ಯವನ್ನು ಶ್ರೀ ಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದು, ಬೆಳಿಗ್ಗೆ 6 ಗಂಟೆಯಿಂದ ಮಹಾ ಚಂಡಿಹೋಮ, 10 ಗಂಟೆಗೆ ಸಾಮೂಹಿಕ ವಿವಾಹ, ಮಧ್ಯಾಹ್ನ 12 ಗಂಟೆಗೆ ಶ್ರೀ ದೇವಿಯರ 101 ಎಡೆ ಕಾರ್ಯಕ್ರಮ ಇರುತ್ತದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement