ಅಪಘಾತ: ಪಾದಚಾರಿ ಸಾವು
ಶಿವಮೊಗ್ಗ: ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಗಾಜನೂರು ಡ್ಯಾಂ ಬಳಿ ನಡೆದಿದೆ.
ಏಳುಮಲೈ (55) ಮೃತಪಟ್ಟವರು. ಇವರು ಗಾಜನೂರು ಡ್ಯಾಂ ಬಳಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಏಳುಮಲೈ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿದಾಖಲಾಗಿದೆ.
ಮದ್ಯ ವಶ: ಮೂವರ ಬಂಧನ
ಶಿವಮೊಗ್ಗ: ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ಘಟನೆ ನಡೆದಿದೆ. ಡಿವಿಎಸ್ ವೃತ್ತದಲ್ಲಿ ಗೋಪಾಲರಾವ್ ಎಂಬುವರು ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸುತ್ತಿದ್ದ ಸುಮಾರು 5,280 ಮೌಲ್ಯದ ಮದ್ಯವನ್ನು ಕೋಟೆ ಪೊಲೀಸರು ಪಡೆಸಿಕೊಂಡಿದ್ದಾರೆ. ಜಯನಗರ ಠಾಣೆ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ಸಾಗಿಸುತ್ತಿದ್ದ ಕಾಳನಾಯ್ಕ್ ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೊನ್ನಾಳ್ಳಿ ರಸ್ತೆಯಲ್ಲಿರುವ ಪಾಪ್ಯುಲರ್ ರೈಸ್ ಮಿಲ್ ಬಳಿ ಬೈಕ್‌ನಲ್ಲಿ ರಘು ಎಂಬುವರು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ ರು. 6 ಸಾವಿರ ಮೌಲ್ಯದ ಮದ್ಯವನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.