ಕಾಂಗ್ರೆಸ್ ಗೆಲುವು ಖಚಿತ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಸಾಗರ: ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಜನರ ಆಕ್ರೋಶಕ್ಕೆ ಗುರಿಯಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸೋಮವಾರ ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಸಿದ ನಂತರ ನಡೆದ ಬಹಿರಂಗ ಸಭೆಯಲ್ಲಿ, ಬಿಜೆಪಿ ಸರ್ಕಾರ ಕಾಂಗ್ರೆಸ್ಸಿನ ಜನಪರ ಯೋಜನೆಗಳನ್ನು ಗುಡಿಸಿ ಹಾಕಿತು. ರೈತರಿಗೆ ಇಂಡೀಕರಣದ ವಿಷ ಉಣಿಸಿತು. ಅರಣ್ಯ ಹಕ್ಕು ಕಾಯ್ದೆಯ ಮುಖವನ್ನೂ ನೋಡದೆ ಅರಣ್ಯವಾಸಿಗಳಿಗೆ ಅನ್ಯಾಯ ಮಾಡಿತು ಎಂದು ಆರೋಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತಪರ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಗೋಪಾಲಗೌಡರಂತಹ ಸುಸಂಸ್ಕೃತರು ಗೆದ್ದಿರುವ ಕ್ಷೇತ್ರದ ಚರಿತ್ರೆಗೆ ಬೇಳೂರು ಮಸಿ ಬಳಿದಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಶನಿಕಾಟವನ್ನು ತೊಲಗಿಸಬೇಕು ಎಂದರು.