ಜೆಡಿಎಸ್: ಬೇಳೂರು ನಾಮಪತ್ರ
ಸಾಗರ: ಸೋಮವಾರ ಅಪಾರ ಅಭಿಮಾನಿಗಳು, ಪಕ್ಷದ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಈ ಚುನಾವಣೆಯಲ್ಲಿ ಯುವಜನರೇ ನನ್ನ ಅಸ್ತ್ರವಾಗಿದ್ದು ಕಳೆದ ಎರಡು ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಲಿದೆ ಎಂದರು.
ನನ್ನ ಸ್ಪರ್ಧೆಯಿಂದ ತಮಗೆ ಸೋಲು ಖಚಿತ ಎನ್ನುವುದನ್ನು ತಿಳಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನನಗೆ ಟಿಕೆಟ್ ಕೊಡಬೇಡಿ ಎಂದು ಜೆಡಿಎಸ್ ವರಿಷ್ಠ ದೇವೆಗೌಡ ಹಾಗೂ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ದೂರವಾಣಿ ಮೂಲಕ ಒತ್ತಾಯಿಸಿದ್ದರು. ಎಷ್ಟೇ ಒತ್ತಡ ತಂದರೂ ನನಗೆ ಟಿಕೆಟ್ ತಪ್ಪಿಸಲು ತಿಮ್ಮಪ್ಪನವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.