ನವೋದಯ ವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷೆ
ಶಿವಮೊಗ್ಗ: ಗಾಜನೂರಿನ ಜವಾಹರ ನವೋದಯ ವಿದ್ಯಾಲಯ 2013-14ನೇ ಶೈಕ್ಷಣಿಕ ಸಾಲಿಗೆ 9ನೇ ತರಗತಿಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಜೂನ್ 23ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.
ಅರ್ಹ ವಿದ್ಯಾರ್ಥಿಗಳ ಜನ್ಮ ದಿನಾಂಕ 01.05.1997 ರಿಂದ 30.04.2001ರ ಒಳಗೆ ಇರಬೇಕು. ಪ್ರಸ್ತುತ ಸಾಲಿನ ಜಿಲ್ಲೆಯಲ್ಲಿ 8ನೇ ತರಗತಿಯಲ್ಲಿ ಓದಿದ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಪರೀಕ್ಷೆ ಇಂಗ್ಲಿಷ್, ಹಿಂದಿಯಲ್ಲಿ ನಡೆಸಲಿದ್ದು, ಅರ್ಜಿ ಸಲ್ಲಿಸಲು ಮೇ 20ಕೊನೆ ದಿನವಾಗಿರುತ್ತದೆ. ಆಸಕ್ತರು ಅರ್ಜಿಯನ್ನು ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ಗಾಜನೂರು ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಅಥವಾ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಟಿಛಢ್ಟಜಛಣಝಣಜ.್ಜ್ಟಢ.್ಝಟಿ ವೆಬ್ಸೈಟ್ನಲ್ಲಿ ಪಡೆಯಬಹುದು. ವೆಬ್ಸೈಟ್ನಲ್ಲಿ ಪ್ರಿಂಟ್ ತೆಗೆದು, ತುಂಬಿದ ಅರ್ಜಿಯನ್ನು ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ ಗಾಜನೂರು, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬಹುದು. ವಿವರಗಳಿಗಾಗಿ- 08182-234250.