ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ: ಶರಾವತಿ ರಾವ್ ನಾಮಪತ್ರ

Lingaraj Badiger
Updated On : 16 Apr 2013, 10:43 am

ಕ.ಪ್ರ.ವಾರ್ತೆ, ಸಾಗರ, ಏ.15 ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ  ಮಾತನಾಡಿದ ಬಿಜೆಪಿ ಅಭ್ಯರ್ಥಿ ಶರಾವತಿ ಸಿ.ರಾವ್ ಅವರು, ಪಕ್ಷದಲ್ಲಿ ನಾವೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಾ, ಪಕ್ಷದಿಂದ ಸಿಗುವ ಎಲ್ಲಾ ಅಧಿಕಾರ ಅನುಭವಿಸಿ ಹೊರಗೆ ಹೋದವರಿಗೆ ಮತದಾರ ಪ್ರಭುಗಳು ತಕ್ಕ ಪಾಠ ಕಲಿಸಬೇಕು ಎಂದರು.
  ಜೆಪಿಗೆ ವ್ಯಕ್ತಿಗಿಂತ ತತ್ವ ಹಾಗೂ ಪಕ್ಷ ದೊಡ್ಡದು. ಯಾರೋ ಕೆಲವರು ಪಕ್ಷ ಬಿಟ್ಟು ಹೋದ ತಕ್ಷಣ ಬಿಜೆಪಿ ಮೂಲೆ ಗುಂಪಾಗುತ್ತದೆ ಎಂದುಕೊಂಡಿದ್ದ ಕೆಲವರಿಗೆ ಈ ಚುನಾವಣೆ ತಕ್ಕ ಪಾಠವಾಗಲಿದೆ. ಬಿಜೆಪಿ ಸರ್ಕಾರದ  ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ನನ್ನ ಗೆಲವಿಗೆ ಕಾರಣವಾಗಲಿದೆ ಎಂದರು.
 ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಕಾಂಗ್ರೆಸ್‌ನಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಇಲ್ಲ. ಜಗದೀಶ್ ಶೆಟ್ಟರ್ ತಮ್ಮ ಮುಖ್ಯಮಂತ್ರಿ ಎಂಬುದು ಈಗಾಗಲೇ ಘೋಷಿಸಲಾಗಿದೆ. ಸಾಗರ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಬೇಳೂರು ಎರಡು ಬಾರಿ ಬಿಜೆಪಿಯಿಂದ ಗೆದ್ದರೂ ಪಕ್ಷಕ್ಕೆ ನಿಷ್ಠರಾಗಿ ಉಳಿದಿಲ್ಲ. ಬೇಳೂರರ ಕಪಿಚೇಷ್ಟೆಗೆ ನಾವು ಕ್ಷಮೆ ಯಾಚಿಸುತ್ತೇವೆ. ಮುಂದೆ ಇಂತಹ ಗೊಂದಲ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement