19ರಿಂದ ಪ್ರಕೃತಿ ಚಿಕಿತ್ಸಾ ಶಿಬಿರ
ಶಿವಮೊಗ್ಗ: ಶ್ರೀ ಮಂಜುನಾಥೇಶ್ವರ ಯೋಗ ಪ್ರತಿಷ್ಠಾನ ಏಪ್ರಿಲ್ 19ರಿಂದ 23ರವರೆಗೆ ಬೆಳಿಗ್ಗೆ 6 ರಿಂದ 7 ಗಂಟೆವರೆಗೆ ಸಂಜೆ 5.30ರಿಂದ 6.30ರವರೆಗೆ ನಗರದ ಗಾಂಧಿ ಬಜಾರ್ನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮುದ್ರಾ ಪ್ರಕೃತಿ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ಮಧುಮೇಹ, ರಕ್ತದೊತ್ತಡ. ಥೈರಾಯಿಡ್, ಮಾನಸಿಕ ಖಿನ್ನತೆ, ನಿದ್ರಾ ಕೊರತೆ, ಬೆನ್ನು ನೋವು, ಹಿಮ್ಮಡಿ ನೋವು, ಸ್ಪಾಂಡಲೈಟಿಸ್, ಅಸ್ತಮಾ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಮಲಬದ್ಧತೆ, ಜೀರ್ಣಶಕ್ತಿಯ ಕೊರತೆ, ಕಣ್ಣಿನ ನೆವೆ, ನೆಗಡಿ, ತಲೆನೋವು ಮತ್ತಿತರ ತೊಂದರೆಗಳಿಗೆ ಸರಳವಾದ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತ ಮಂಜನಾಥ್ ಮತ್ತು ತಂಡವರು ಚಿಕಿತ್ಸಾ ತರಬೇತಿ ನೀಡುವರು.
ಆಸಕ್ತರು ವಿವರಗಳಿಗಾಗಿ- 8197048071.