ಇಂದು ಸಾಂಸ್ಕೃತಿಕ ದಿನಾಚರಣೆ
ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಏ.17ರಂದು ಸಾಂಸ್ಕೃತಿಕ ದಿನಾಚರಣೆ ಹಮ್ಮಿಕೊಂಡಿದೆ. ಬೆಳಿಗ್ಗೆ 12 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನಾಡು, ನುಡಿ ಸಂಸ್ಕೃತಿಗೆ ಸಂಬಂಧಿಸಿದಂತೆ ವೈಯಕ್ತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ನಿವೃತ್ತ ನೌಕರರ ಸಂಘ ಏಪ್ರಿಲ್ 18ರಂದು ಬಸವನಗುಡಿಯ ಶ್ರೀ ಶೈಲಮಲ್ಲಿಕಾರ್ಜುನ ಸಭಾ ಭವನದಲ್ಲಿ ಸಂಘದ ಸರ್ವ ಸದಸ್ಯರ ಸಭೆ ಕರೆದಿದೆ. ಸಭೆಗೆ ಹಾಜರಾಗುವ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ತಪ್ಪದೇ ತರಬೇಕು ಎಂದು ಸಂಘಧ ಅಧ್ಯಕ್ಷರು ತಿಳಿಸಿದ್ದಾರೆ.
ಸಂತಾಪ
ಶಿವಮೊಗ್ಗ: ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ನಿಧನಕ್ಕೆ ದುರ್ಗಿಗುಡಿ ಕನ್ನಡ ಸಂಘ ಸಂತಾಪ ಸೂಚಿಸಿದೆ. ಬಹುಭಾಷೆಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ ಕೀರ್ತಿ ಪಿ.ಬಿ. ಶ್ರೀನಿವಾಸ್ರಿಗೆ ಸಲ್ಲಬೇಕು. ಡಾ. ರಾಜ್ ಕುಮಾರ್ ಅವರ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಿಗೆ ಪಿಬಿಶ್ರೀ ಅವರು ಕಂಠಸಿರಿ ನೀಡಿದ್ದಾರೆ. ಇಂತಹ ಮಹಾನ್ ಚೇತನವನ್ನು ಕಳೆದಕೊಂಡ ಕನ್ನಡ ಚಿತ್ರರಂಗ ಬರಿದಾಗಿದೆ ಎಂದು ಸಂಘ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.