ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿ ಅಂಬೇಡ್ಕರ್

Lingaraj Badiger
Updated On : 17 Apr 2013, 10:52 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಏ.16
ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಏಕೈಕ ವ್ಯಕ್ತಿ ಎಂದರೆ ಅಂಬೇಡ್ಕರ್ ಮಾತ್ರ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
ಸಮಿತಿ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 122ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ಸಾಕಷ್ಟು ಶ್ರಮಿಸಿವುದರೊಂದಿಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದರು.
ಅಧಿಕಾರದ ಗದ್ದುಗೆಯಲ್ಲಿ ಕುಳಿತು ಸ್ವಾತಂತ್ರ್ಯ ಸಮಾನತೆಯ ಘೋಷಣೆ ಮಾಡುವ ರಾಜಕೀಯ ಮುಖಂಡರು ದಲಿತರ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳನ್ನು ನಿರ್ಲಕ್ಷ್ಯಕ್ಕೊಳಗಾದ ಕೇರಿಗಳಿಗೆ ತಲುಪಿಸಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಿಂಚಿನ ಸಂಚಾರ: ಏಪ್ರಿಲ್ 14 ಕೇವಲ ಕ್ಯಾಲೆಂಡರ್‌ನಲ್ಲಿ ಗುರುತಿಸುವ ದಿನವಾಗಬಾರದು. ಅದು ಭಾರತದ ಸಂವಿಧಾನ ಬಗ್ಗೆ ಅಪಾರ ಕನಸುಗಳು, ಉತ್ತಮ ಆದರ್ಶ ಸಮಾಜ ಕಟ್ಟಲೆಂದು ಹುಟ್ಟಿಬಂದ ಮಹಾಪ್ರವಾದಿಯ ಜನ್ಮದಿನವಾಗಬೇಕು ಎಂದ ಅವರು, ಇದು ಕೋಟ್ಯಂತರ ದಲಿತ ಬಂಧುಗಳು, ನೊಂದವರ ಎದೆಗಳಲ್ಲಿ ಮಿಂಚಿನ ಸಂಚಾರ ಮೂಡಿಸಲ್ಪಟ್ಟ ಅಮೋಘ ದಿನ ಎಂದರು.
ಅಂಬೇಡ್ಕರ್ ಅವರ ಆದರ್ಶಗಳು, ತತ್ವಗಳಿಗೆ ಸಮಾನವಾದ ಜೀವನ ನಡೆಸಲು ದಲಿತ ಸಮುದಾಯ ಸಜ್ಜಾಗಬೇಕು. ಅವರ ಸಂಘಟಿತ ಹೋರಾಟದ ಮನೋಭಾವನೆಗಳನ್ನು ಇಂದು ದಲಿತರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ನಗರ ಸಂಚಾಲಕ ಹರಿಗೆ ರವಿ, ಲೋಕನಾಥ್, ಹುಣಸೋಡು ಶೇಷಪ್ಪ, ಸ್ಪಂದನಚಂದ್ರು, ಶಿವಕುಮಾರ್, ಮತ್ತೂರು ವೇಲು, ಬಿ.ಕೆ. ಹನುಮಂತಪ್ಪ, ಚಿಕ್ಕಲ್‌ಸುರೇಶ್  ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement