ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅಭಿವೃದ್ಧಿಯೇ ಗುರಿ'

Lingaraj Badiger
Updated On : 18 Apr 2013, 11:00 am

ಕ.ಪ್ರ.ವಾರ್ತೆ, ಭದ್ರಾವತಿ, ಏ.17
ಭದ್ರಾವತಿಯಲ್ಲಿ ಈಗ ನಿಜವಾದ ಕಾಂಗ್ರೆಸ್ ಹೊರಬಂದಿದೆ ಎಂದು ವಿಧಾನಸಭಾ ಚುನಾವಣೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರ ಸಿ.ಎಂ. ಇಬ್ರಾಹಿಂ ಹೇಳಿದರು. ತಮ್ಮ ನಾಮಪತ್ರವನ್ನು ಬುಧವಾರ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಂತರ ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು.
   ಅರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಾಗೂ ಎಲ್ಲಾ ವಲಯಗಳಲ್ಲೂ ಭದ್ರಾವತಿ ಅವನತಿಯ ಹಾದಿ ಹಿಡಿದಿದ್ದು, ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಪಟ್ಟಣದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದೆ ಜನರು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.
  ಒಂದು ಸುಸಜ್ಜಿತ ಆಸ್ಪತ್ರೆ, ರಸ್ತೆಗಳು, ಸಾರ್ವಜನಿಕ ಅಥವಾ ಖಾಸಗಿ ವಲಯದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಇವಿಷ್ಟೂ ಆದ್ಯತೆ ಮೇಲೆ ಆಗಬೇಕಾದ ಅವಶ್ಯಕತೆ ಇದೆ ಮತ್ತು ಅದರತ್ತ ತಾವು ತಕ್ಷಣ ಗಮನ ನೀಡುವುದಾಗಿ ತಿಳಿಸಿದರು.
 ತ ಾವು ಸಚಿವರಾದರೆ ಮಾತ್ರ ಭದ್ರಾವತಿಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ವಾಸ್ತವ್ಯ ಹೂಡುವುದಾಗಿ ಹೇಳಿರುವುದು ಸತ್ಯವೆಂದು ಒಪ್ಪಿಕೊಂಡು ಇಬ್ರಾಹಿಂ ಮಿಕ್ಕ ದಿನಗಳಲ್ಲಿ ತಾವು ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಇರಬೇಕಾಗುತ್ತದೆಂದರು.
  ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯೆ ಬಲ್ಕಿಶ್ ಬಾನು, ಜಿಲ್ಲಾ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಸೈಯದ್ ವಾಹಿದ್ ಅಡ್ಡು, ಮಾಜಿ ಕೃ.ಉ.ಮಾ. ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಮರಾಠ ಸಮುದಾಯದ ಮುಖಂಡ ಸತ್ಯನಾರಾಯಣ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್, ಎಸ್.ಎಲ್. ಲಕ್ಷ್ಮಣ್ ಮೊದಲಾದವರು ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement