ಕರ್ವಾಲುಗೆ ರವಿಶಾಸ್ತ್ರಿ ಭೇಟಿ
ಕಾರ್ಕಳ: ಅಂತಾರಾಷ್ಟ್ರೀಯ ಕ್ರಿಕೆಟಿಗ ರವಿಶಾಸ್ತ್ರಿ ಬುಧವಾರ ಕಾರ್ಕಳದ ಬೈಲೂರು ಗ್ರಾಮದಲ್ಲಿರುವ ಕರ್ವಾಲುವಿನ ವಿಷ್ಣುಮೂರ್ತಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಈ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ರವಿಶಾಸ್ತ್ರಿ ಈ ಬಾರಿ ಕುಟುಂಬ ಸಮೇತರಾಗಿ ಆಗಮಿಸಿದ್ದರು. ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು.