ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೊನೆ ದಿನ: ಸಾಗರದಲ್ಲಿ 3 ನಾಮಪತ್ರ

Lingaraj Badiger
Updated On : 18 Apr 2013, 10:57 am

ಸಾಗರ: ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದಿಂದ ಕೋಣನಕಟ್ಟೆ ವೆಂಕಟೇಶ್ ಬುಧವಾರ ವಿಶಿಷ್ಠ  ರೀತಿಯಲ್ಲಿ ನಾಮಪತ್ರ ಸಲ್ಲಿಸಿದರು.
 ಮಲೆನಾಡಿನ ಸಾಂಪ್ರದಾಯಿಕ ವಸ್ತ್ರಧರಿಸಿ, ತಲೆಗೆ ಅಡಕೆ ಹಾಳೆ ಟೋಪಿ ಹಾಕಿಕೊಂಡು ಎತ್ತಿನಗಾಡಿಯ ಮೂಲಕ ಮೆರವಣಿಗೆ ನಡೆಸಿ ಗಮನ ಸೆಳೆದ ಅಭ್ಯರ್ಥಿ ವೆಂಕಟೇಶ್ ಉಪವಿಭಾಗಾಧಿಕಾರಿಗಳ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಸಮಸ್ಯೆಗೆ ಸ್ಪಂದನೆ: ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಜೊತೆಗೆ ಕೆರೆ ಒತ್ತುವರಿ ತೆರವುಗೊಳಿಸುವುದು, ಅರಣ್ಯಭೂಮಿ ಕಾಯ್ದೆ ಅನುಷ್ಠಾನ, ಬಗರ್ ಹುಕುಂ ಸಕ್ರಮ, ಆಶ್ರಯ ನಿವೇಶನ ಹಂಚಿಕೆಯಲ್ಲಿ ಹೊಸ ವಿಧಾನ ಅಳವಡಿಸಿ ಅರ್ಹರಿಗೆ ಸೂರು ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಮೂವರ ನಾಮಪತ್ರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಸಾಗರದಲ್ಲಿ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಬಹುಜನ ಸಮಾಜವಾದಿ ಪಕ್ಷದಿಂದ ವೆಂಕಟೇಶ್, ಬಿ.ಎಸ್.ಆರ್. ಕಾಂಗ್ರೆಸ್‌ನಿಂದ ಗಣೇಶ್ ಬಳ್ಳಿ ಹಾಗೂ ರಾಮಚಂದ್ರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement