ವಂಚಿಸುವ ರಾಜಕಾರಣಿಗೆ ಕಡಿವಾಣ ಹಾಕಿ
ಸೊರಬ: ಚುನಾವಣೆ ವೇಳೆ ಜನರನ್ನು ವಂಚಿಸುವ ರಾಜಕಾರಣಿಗಳ ಬೆಳವಣಿಗೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ಪಕ್ಷೇತರ ಅಭ್ಯರ್ಥಿ ಕೆ. ಗುರುಮೂರ್ತಿ ಓಟೂರು ಅಭಿಪ್ರಾಯಪಟ್ಟರು.
ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ರೈತಾಪಿ ವರ್ಗವೆ ಪ್ರಧಾನವಾಗಿದ್ದು, ಅವರ ಮೂಲ ಸಮಸ್ಯೆಗಳನ್ನು ನೀಗಿಸುವಲ್ಲಿ ಇಲ್ಲಿಂದ ಆಯ್ಕೆಗೊಂಡ ಎಲ್ಲ ಜನಪ್ರತಿನಿಧಿಗಳು ಸೋತಿದ್ದಾರೆ. ಇವರ ಬೂಟಾಟಿಕೆ ಪ್ರವೃತ್ತಿ ಇಂದು ಜನತೆಗೆ ಅರಿವಾಗಿದ್ದು, ಕೃಷಿಕನನ್ನು ಈ ಬಾರಿ ಚುನಾಯಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ನಾಮಪತ್ರ ಸಲ್ಲಿಸುವುದಕ್ಕಿಂತಲೂ ಮುನ್ನ ಕೃಷಿ ಸಂಪ್ರದಾಯಿಕ ಉಡುಪು ಧರಿಸಿ, ತಮ್ಮ ಬೆಂಬಲಿಗರೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ತೆರಳಿದರು.
ಜಿ. ದಿಂಬಪ್ಪ, ಕೆ.ಬಿ. ಕೃಷ್ಣಮೂರ್ತಿ, ಶಿವಕುಮಾರ್, ಹುಚ್ಚರಾಯಪ್ಪ, ಕೊಡಕಣಿ ಈಶ್ವರ್, ಗಣಪತಿ, ಕೆರೆಯಪ್ಪ, ಕುದರಗಣಿ ಅಣ್ಣಪ್ಪ, ರಘುಪತಿ ಯಲವಾಟ, ಯೋಗೇಶ್, ಶಿಗ್ಗಾ, ಬಾಡದಬೈಲು, ಕುಮ್ಮೂರು, ಚಿಕ್ಕಾವಲಿ, ಗುಡವಿ, ತ್ಯಾವಗೋಡು, ಕೊರಕೋಡು, ಕುಪ್ಪಗಡ್ಡೆ, ಕುಮ್ರಿ, ಹಾಲಗಳಲೆ, ಕಪ್ಪಗಳಲೆ, ಕಾಗೋಡು, ಪಡವಗೋಡು, ಮಂಡಗಳಲೆ, ಶಕುನವಳ್ಳಿ. ಗುಡುಗಿನಕೊಪ್ಪ, ಗುಡ್ಡೆಕೊಪ್ಪ ಇದ್ದರು.