ಹೃದಯಾಘಾತ: ಯೋಧ ಸಾವು
ತೀರ್ಥಹಳ್ಳಿ: ಚುನಾವಣಾ ಭದ್ರತೆಗಾಗಿ ತೀರ್ಥಹಳ್ಳಿಗೆ ಆಗಮಿಸಿದ್ದ ಬಿಎಸ್ಎಫ್ ತುಕಡಿಯ ಬಲವಾನ್ ಸಿಂಗ್ (41) ಇವರು ಬುಧವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯದವರಾದ ಇವರು ಹರ್ಯಾಣ ನಂ.107 ಬೆಟಾಲಿಯನ್ ರೆಜಿಮೆಂಟಿನಲ್ಲಿ ಸೇವೆಸಲ್ಲಿಸುತ್ತಿದ್ದರು. ಮೃತರ ಪಾರ್ಥಿವ ಶರೀರವನ್ನು ಸಂಜೆವೇಳೆಗೆ ಜಮ್ಮುಕಾಶ್ಮೀರದ ಸ್ವಗ್ರಾಮಕ್ಕೆ ತಲುಪಿಸಲಾಗುತ್ತದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.