ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ನಗರದೆಲ್ಲೆಡೆ ಶ್ರೀರಾಮನವಮಿ ಸಂಭ್ರಮ

Lingaraj Badiger
Updated On : 19 Apr 2013, 10:47 am

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಶ್ರೀರಾಮನವಮಿ ಪ್ರಯುಕ್ತ ಏಪ್ರಿಲ್ 19ರಂದು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ರವೀಂದ್ರ ನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಏ.19ರಂದು ಸಂಜೆ 6 ಗಂಟೆಗೆ ದಿ ಆರ್ಟ್ ಆಫ್ ಲಿವಿಂಗ್‌ನ ಪ್ರಸಿದ್ಧ ಗಾಯಕ ಸುದರ್ಶನ್ ಜೀ ಹಾಗೂ ತಂಡದಿಂದ ಶ್ರೀರಾಮನಾಮ ಸಂಕಿರ್ತನಮ್ ಏರ್ಪಡಿಸಲಾಗಿದೆ.
ವಿನೋಬನಗರದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮನವಮಿ ಹಾಗೂ 13ನೇ ವರ್ಷದ ವಾರ್ಷಿಕೋತ್ಸವ ಹಮ್ಮಿಕೊಂಡಿದೆ. ಏ.19ರಂದು ಶ್ರೀಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಆಲಂಕಾರ, ಮಧ್ಯಾಹ್ನ ಶ್ರೀರಾಮತಾರಕ ಹೋಮ, ಮಹಾಪ್ರಸಾದ ವಿನಿಯೋಗ, ಸಂಜೆ 7 ಗಂಟೆಗೆ ಸಪ್ತಸ್ವರ ಸುಗಮ ಸಂಗೀತ ಶಾಲೆಯ ವಸಂತ ವೇಣುಗೋಪಾಲ್ ಭಾಪಾಳಂ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.
ಪವಮಾನ ಅಭಿಷೇಕ: 20ರಂದು ಪವಮಾನ ಅಭಿಷೇಕ, ವಿಶೇಷ ಅಲಂಕಾರ, ಮಧ್ಯಾಹ್ನ ಶ್ರೀ ಮಾರುತಿ ಹೋಮ, ಮಹಾಪ್ರಸಾದ ವಿನಿಯೋಗ, ಸಂಜೆ 7 ಗಂಟೆಗೆ ಕರ್ನಾಟಕ ಸಂಗೀತ ಪಾಠಶಾಲೆಯ ರಮೇಶ್ ಜೋಯ್ಸಾ ಮತ್ತು ವೃಂದದಿಂದ ಸಂಗೀತ ಕಚೇರಿ ನಡೆಯುತ್ತದೆ ಎಂದು ದೇವಸ್ಥಾನದ ಅರ್ಚಕ ವೃಂದ ತಿಳಿಸಿದೆ. ವಿಪ್ರ ಟ್ರಸ್ಟ್‌ನ ಸಭಾಂಗಣದಲ್ಲಿ ಏ.19ರಂದು ಸಂಜೆ 6ಗಂಟೆಗೆ ಶ್ರೀ ರಾಮನವಮಿ ಪ್ರಯುಕ್ತ ವಿದ್ವಾನ್ ಅರುಣಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಗೀತಾ ಕಾರ್ಯಕ್ರಮವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಜಯನಗರದ ಶ್ರೀ ಸೀತಾರಾಮ ಮಂದಿರ ಟ್ರಸ್ಟ್‌ನಿಂದ ರಾಮಮಂದಿರದಲ್ಲಿ 19ರಂದು ಶ್ರೀರಾಮನವಮಿ, 20ರಂದು ಬೆಳಿಗ್ಗೆ 9ಗಂಟೆಯಿಂದ ಶ್ರೀಸ್ವಾಮಿಗೆ ಲಕ್ಷಾರ್ಚನೆ, ಸಂಜೆ 7ಕ್ಕೆ ಸೀತಾ ಕಲ್ಯಾಣೋತ್ಸವ, 21ರಂದು ಬೆಳಿಗ್ಗೆ 10ಕ್ಕೆ ಪುಷ್ಪಯಾಗ, ರಾತ್ರಿ 8ರಿಂದ ಉಯ್ಯಾಲೆ ಉತ್ಸವ, 22 ರಂದು ಬೆಳಿಗ್ಗೆ 9 ರಿಂದ ಮಹಾಸಾಮ್ರಾಜ್ಯ ಪಟ್ಟಾಭೀಷೇಕವಿದ್ದು, ಬೆಲಗೂರು ಕ್ಷೇತ್ರದ ಶ್ರೀ ಬಿಂದು ಮಾಧವಶರ್ಮ ಸ್ವಾಮೀಜಿ ಹಾಗೂ ಕೂಡಲಿಯ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 23ರಂದು ರಾತ್ರಿ ರಾಜಬೀದಿ ಉತ್ಸವ, 24ರಂದು ಶಯನೋತ್ಸವ ಅಲಂಕಾರವಿರುತ್ತದೆ ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement