ಈಶ್ವರಪ್ಪ ಹಿಂದುತ್ವದ ಹಿತ ಕಾಯುತ್ತಿಲ್ಲ: ಶ್ರೀಕಾಂತ್
ಶಿವಮೊಗ್ಗ: ಹಿಂದೂಪರ ಸಂಘಟನೆಗಳ ಹಿತಕಾಯುವಲ್ಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ ಹಿಂದೂಸ್ಥಾನ ಸೇನಾ ಜಿಲ್ಲಾ ಸಂಚಾಲಕ ಶ್ರೀಕಾಂತ್ ಜಿ. ಭಟ್ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿಎಂ ಈಶ್ವರಪ್ಪ ಹಿಂದೂ ಪರವಾಗಿ ಮಾತನಾಡಿ ಮತದಾರರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಅಲ್ಲದೇ ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಾರೆಯೇ ಹೊರೆತು ಹಿಂದುತ್ವದ ಹಿತಕಾಯುವರಲ್ಲ ಎಂದು ಟಿಕೀಸಿದರು.
ಈಶ್ವರಪ್ಪ ವಿಫಲ: ಜಿಲ್ಲೆಯಲ್ಲಿ 2006ರಿಂದ ಇಲ್ಲಿಯವರೆಗೆ 900ಕ್ಕೂ ಹೆಚ್ಚು ಜಾತಿನಿಂದನೆ ಪ್ರಕರಣಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ ಈಶ್ವರಪ್ಪ ಮಧ್ಯಪ್ರವೇಶಿಸಿ ರಾಜಿಮಾಡಿಸಬಹುದಿತ್ತು. ಎಲ್ಲಾ ಸಮಾಜವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬಹುದಿತ್ತು. ಆದರೆ, ಇದು ಅವರಿಂದ ಸಾಧ್ಯವಾಗಲಿಲ್ಲ. ಇವರಿಗೆ ಪರಿಹಾರ ಕೊಡಿಸುವಲ್ಲಿಯೂ ಈಶ್ವರಪ್ಪ ವಿಫಲರಾಗಿದ್ದಾರೆ ಎಂದು ದೂರಿದರು.
ಈ ಹಿಂದೆ ಈಶ್ವರಪ್ಪ ಅವರಿಗೆ ಹಿಂದುಪರ ಸಂಘಟನೆಗಳ ಮೇಲೆ ಹೂಡಲಾಗಿರುವ ಪ್ರಕರಣಗಳನ್ನು ಹಿಂದುಸ್ಥಾನ ಸೇನಾ ಮನವಿ ಮಾಡಿತ್ತು. ಆದರೆ, ಡಿಸಿಎಂ ಈಶ್ವರಪ್ಪ ಮನವಿಗೆ ಸ್ಪಂದಿಸಲಿಲ್ಲ ಎಂದು ಶ್ರೀಕಾಂತ್ ಜಿ. ಭಟ್ ಆಪಾದಿಸಿದರು. ವಕೀಲ ಉದಯಕುಮಾರ್, ಪ್ರವೀಣ್ ಹಾಗೂ ದೇವರಾಜ್ ಇತರರಿದ್ದರು.