ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲಾ ಕ್ಷೇತ್ರಗಳಿಗೂ ವೀಕ್ಷಕರ ನೇಮಕ

Lingaraj Badiger
Updated On : 19 Apr 2013, 10:55 am

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಬೇರೆ ರಾಜ್ಯಗಳ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಅವರು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಲಭ್ಯವಿರುತ್ತಾರೆ. ಸಾರ್ವಜನಿಕರು ಈ ಕ್ಷೇತ್ರದ ಚುನಾವಣಾ ಸಂಬಂಧ ದೂರುಗಳಿದ್ದಲ್ಲಿ, ವೀಕ್ಷಕರ ಗಮನಕ್ಕೆ ತರುವ ಯಾವುದೇ ವಿಷಯಗಳಿದ್ದಲ್ಲಿ ಅವರನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ತಿಳಿಸಿದ್ದಾರೆ.
ಪೊಲೀಸ್ ಚುನಾವಣಾ ವೀಕ್ಷಕರಾಗಿ ಐಪಿಎಸ್ ಅಧಿಕಾರಿ ಶ್ರೀನಿವಾಸ ರೆಡ್ಡಿ (ಮೊ- 94487-54068) ಅವರನ್ನು ಸಮನ್ವಯಾಧಿಕಾರಿಯಾಗಿ ಎಂ. ಚಂದ್ರಶೇಖರ್ (ಮೊ- 99645-99986) ಅವರನ್ನು ನೇಮಕ ಮಾಡಲಾಗಿದೆ. ಇವರನ್ನು ಪ್ರತಿದಿನ ಸಂಜೆ 4ರಿಂದ 5 ಗಂಟೆ ವರೆಗೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅತಿಗಣ್ಯರ ಅತಿಥಿ ಗೃಹದಲ್ಲಿ ಭೇಟಿ ಮಾಡಬಹುದು.
ಗ್ರಾಮಾಂತರ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಆಶಿಶ್ ಜೋಷಿ ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಕೆ.ಎಲ್. ಸುಬ್ರಹ್ಮಣ್ಯ ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆ ವರೆಗೆ ಸಾಗರ ರಸ್ತೆಯ ಅತಿಗಣ್ಯರ ಅತಿಥಿ ಗೃಹದಲ್ಲಿ ಭೇಟಿ ಮಾಡಬಹುದು.
ವೀಕ್ಷಕರು ಮೊ.ಸಂ.94487 54263 ಹಾಗೂ 9480876008ಗೆ ಕರೆ ಮಾಡಬಹುದಾಗಿದೆ.
ಭದ್ರಾವತಿ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಹುಜರ್ ಲೋಲನ್ (ಮೊ- 94489-05421) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಮಂಜುನಾಥ್ (ಮೊ- 94485-66988) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 6 ಗಂಟೆಯಿಂದ 7 ಗಂಟೆ ವರೆಗೆ ಭದ್ರಾವತಿಯ ವಿಐಎಸ್‌ಎಲ್ ಅತಿಥಿ ಗೃಹದ ರೂಂ ನಂ.17ರಲ್ಲಿ ಭೇಟಿ ಮಾಡಬಹುದು.
ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಶ್ರೀನಿವಾಸನ್ ಶ್ರೀನರೇಶ್(ಮೊ-94489-05424) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಪಿ.ಡಿ. ಗಣಪತಿ (ಮೊ- 94808-76005) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಶಿವಮೊಗ್ಗ ನಗರಸಭೆ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಬಹುದು.
ತೀರ್ಥಹಳ್ಳಿ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ತಪನ್‌ಚಂದ್ರ ಗೋಸ್ವಾಮಿ (ಮೊ- 94489-05467) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಜಿ.ಎಸ್. ಗಡದವರ್ (ಮೊ- 93427-73427) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 3 ಗಂಟೆಯಿಂದ 5 ಗಂಟೆ ವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಬಹುದು.
ಶಿಕಾರಿಪುರ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಡಾ. ಸಂತೋಷ್ ಬಾಬು (ಮೊ- 94489-05423) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಅಶೋಕ್ ಮೊರಬ್ (ಮೊ- 94488-87097) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 4 ಗಂಟೆಯಿಂದ 5 ಗಂಟೆ ವರೆಗೆ ಶಿಕಾರಿಪುರದ ಲೋಕೋಪಯೋಗಿ ನಿರೀಕ್ಷಣ ಮಂದಿರದಲ್ಲಿ ಭೇಟಿ ಮಾಡಬಹುದು.
ಸೊರಬ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಇ. ದೇವದಾಸನ್ (ಮೊ- 94489-05548) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ದಿನೇಶ್ ಆರ್.ಜೆ. (ಮೊ- 94816-63430) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 5 ಗಂಟೆಯಿಂದ 7 ಗಂಟೆ ವರೆಗೆ ಸೊರಬದ ತಾಲೂಕು ಕಚೇರಿಯಲ್ಲಿರುವ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಭೇಟಿ ಮಾಡಬಹುದು.
ಸಾಗರ: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಸುಬ್ಬರಾವ್ ಬಿ. ಪಾಟೀಲ್ (ಮೊ- 94489-05482) ನೇಮಕಗೊಂಡಿದ್ದಾರೆ. ಇವರಿಗೆ ಸ್ಥಳೀಯ ಸಮನ್ವಯಾಧಿಕಾರಿಯಾಗಿ ಪಿ.ಪಿ. ಬ್ಯಾನರ್ಜಿ (ಮೊ- 94481-05495) ಅವರನ್ನು ಜಿಲ್ಲಾ ಚುನಾವಣಾ ಆಯೋಗವು ನೇಮಕ ಮಾಡಿದೆ. ಇವರನ್ನು ಪ್ರತಿ ದಿನ ಸಂಜೆ 5 ಗಂಟೆಯಿಂದ 7 ಗಂಟೆ ವರೆಗೆ ಸಾಗರದ ಲೋಕೋಪಯೋಗಿ ನಿರೀಕ್ಷಣ ಮಂದಿರದಲ್ಲಿ ಭೇಟಿ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement