ಎಸ್.ಕೆ. ಮರಿಯಪ್ಪಗೆ ಸನ್ಮಾನ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಬೆಂಗಳೂರಿನ ವಸತಿ ಮಹಾ ಮಂಡಳದಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪಡೆದ ಶಿಮೊಮಗ್ಗ ಜಿಲ್ಲಾ ಸಹಕಾರ ಯೂನಿಯನ್ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಎಸ್.ಕೆ. ಮರಿಯಪ್ಪ ನವರಿಗೆ ಶಿವಮೊಗ್ಗ ಯೂನಿಯನ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಚ್. ರವಿಚಂದ್ರ, ಬಿ.ಜಿ. ದಿನೇಶ್ ಬರದವಳ್ಳಿ, ರವಿಕುಮಾರ್, ಬಿ.ಡಿ. ಭೂಕಾಂತ್, ಸಹಕಾರ ಸಂಘಗಳ ಉಪನಿಬಂಧಕ ಅಶೋಕ ವೆಂ.ಮೊರಬ, ಮೋಹನ್ ಉಂಬಳೇಬೈಲು, ಎಚ್.ಯು. ಸುರೇಶ್, ಬಿ.ಎಂ. ಪಾಲಾಕ್ಷಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಸ್.ಕೆ., ಜಿಲ್ಲಾ ಸಹಕಾರ ಶಿಕ್ಷಕ್ಷಿ ಟಿ. ಸರಸ್ವತಿ, ವ್ಯವಸ್ಥಾಪಕ ಕೆ.ಸಿ. ಹನುಮಂತಪ್ಪ, ಗುಮಾಸ್ತ ಕೆ. ಸಂಪತ್ಕುಮಾರ್ ಉಪಸ್ಥಿತರಿದ್ದರು.
ಏಪ್ರಿಲ್ ತಿಂಗಳ ಪಡಿತರ ಬಿಡುಗಡೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಜಿಲ್ಲಾ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಏಪ್ರಿಲ್ ಮಾಹೆಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ 29 ಕೆಜಿ ಅಕ್ಕಿ ಮತ್ತು 6 ಕೆಜಿ ಗೋಧಿ ಹಾಗೂ 1.5 ಕೆಜಿ ಸಕ್ಕರೆಯನ್ನು, ಅಕ್ಷಯ ಕಾರ್ಡುದಾರರಿಗೆ ಒಂದು ಯೂನಿಟ್ಗೆ 4 ಕೆಜಿ ಅಕ್ಕಿ, 1ಕೆಜಿ ಗೋಧಿ, 1.5ಕೆಜಿ ಸಕ್ಕರೆ, 2 ಯೂನಿಟ್ಗೆ 8 ಕೆಜಿ ಅಕ್ಕಿ, 1ಕೆಜಿ ಗೋಧಿ, 1.5ಕೆ.ಜಿ. ಸಕ್ಕರೆ, 3 ಯೂನಿಟ್ಗೆ 12 ಕೆಜಿ ಅಕ್ಕಿ, 1ಕೆಜಿ ಗೋಧಿ, 1.5ಕೆಜಿ ಸಕ್ಕರೆ ವಿತರಿಸಲಾಗುತ್ತದೆ. ಅನಿಲ ರಹಿತ ಪಡಿತರದಾರರಿಗೆ 3ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದೆಂದು ತಿಳಿಸಿದ್ದಾರೆ.