ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೊಪ್ಪಲು ಮಂಜಣ್ಣ ಬಿಜೆಪಿಯಿಂದ ನಾಮಪತ್ರ

Lingaraj Badiger
Updated On : 19 Apr 2013, 10:55 am

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಶಿಕಾರಿಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಸ್.ಎಚ್. ಮಂಜುನಾಥ್ (ಕೊಪ್ಪಲು ಮಂಜಣ್ಣ) ಅವರು ನಾಮಪತ್ರ ಸಲ್ಲಿಸಿದರು.
ಮೊದಲಿನಿಂದಲೂ ಯಡಿಯೂರಪ್ಪ ವಿರೋಧಿ ರಾಜಕಾರಣ ಮಾಡುತ್ತಾ ಬಂದಿರುವ ಕೊಪ್ಪಲು ಮಂಜಣ್ಣ ಅವರು ಯಡಿಯೂರಪ್ಪ ಅವರು ಬಿಜೆಪಿ ತೊರೆದ ನಂತರ ಈ ಪಕ್ಷ ಸೇರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷರಾಗಿಯೂ ನೇಮಕವಾಗಿದ್ದರು. ಇವರ ತಂದೆ ಕೊಪ್ಪಲು ಹಾಲಪ್ಪ ಅವರು ಸತತ 30 ವರ್ಷ ಶಿಕಾರಿಪುರ ಪುರಸಭೆಅಧ್ಯಕ್ಷರಾಗಿದ್ದರು.
ಕೊಪ್ಪಲು ಮಂಜಣ್ಣ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದು, ನಂತರ ಜೆಡಿಎಸ್ ಸೇರ್ಪಡೆಯಾಗಿದ್ದರು. ಆದರೆ ಮುಖಂಡರೊಂದಿಗೆ ಭಿನ್ನಮತ ಉಂಟಾದ ಕಾರಣ ಯಡಿಯೂರಪ್ಪ ಇಲ್ಲದ ಬಿಜೆಪಿಗೆ ಸೇರಿದರು. ಈಗ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.   ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement