ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚುನಾವಣಾ ಸಹಾಯವಾಣಿ

Lingaraj Badiger
Updated On : 19 Apr 2013, 10:56 am

ಸೊರಬ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಚುನಾವಣಾ ಮಾಹಿತಿಗಾಗಿ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಚುನಾವಣಾ ಸಹಾಯವಾಣಿ ದೂ- 08184-270057 ಆಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ 3 ಲಕ್ಷ ವಶ
ಸೊರಬ: ಆನವಟ್ಟಿ ವ್ಯಾಪ್ತಿಯಲ್ಲಿ ತೆರಳುತ್ತಿದ್ದ ಕಾರೊಂದನ್ನು ತಡೆದು, ಅದರಲ್ಲಿದ್ದ 3 ಲಕ್ಷ ಹಣವನ್ನು ಆನವಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಅಂಬಾರಾಯ್ತುಂಡ ತನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಗುರುವಾರ ಸಂಜೆ ಆನವಟ್ಟಿ ಬಳಿ ತೆರಳುತ್ತಿದ್ದ ಕೆಎ-28 ಎಂ 5847ರ ಸಂಖ್ಯೆ ಕಾರನ್ನು ತಡೆದಾಗ ಅದರಲ್ಲಿ 3 ಲಕ್ಷ ಹಣವಿದ್ದುದು ಕಂಡುಬಂದಿದೆ. ಕಾರಿನಲ್ಲಿದ್ದ ಬೆಳಗಾಂನ ಜೈನ್ ಡ್ರಿಪ್ ಇರಿಗೇಶನ್ ಎಂಡಿ ಆನಂದ ಅವರು ಹಣದ ಬಗ್ಗೆ ಸರಿಯಾದ ಮಾಹಿತಿ, ಆಧಾರ ನೀಡದೇ ಇರುವುದರಿಂದ ಹಣದೊಂದಿಗೆ ಕಾರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿದ್ಧರಾಮಯ್ಯ ಹೇಳಿಕೆಗೆ ಖಂಡನೆ
ಶಿವಮೊಗ್ಗ: ಬುಧವಾರ ಬೆಂಗಳೂರಿನ ಬಿಜೆಪಿ ಕಚೇರಿ ಎದುರು ನಡೆದಿರುವ ಬಾಂಬ್ ಸ್ಫೋಟವನ್ನು ಸಂಘ ಪರಿವಾರದವರೇ ಮಾಡಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವುದುನ್ನು ಬಿಜೆಪಿ ಶಿವಮೊಗ್ಗ ಘಟಕ ಖಂಡಿಸಿದೆ.
  ಇಂತಹ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ, ಸಿದ್ದರಾಮಯ್ಯನವರಿಗೆ ಮಾನಸಿಕ ಭ್ರಮೆಗೆ ಒಳಗಾಗಿದ್ದಾರೆಂದು ಅನಿಸುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ತಲೆಬುಡವಿಲ್ಲದ ಹೇಳಿಕೆ  ನೀಡುವ ಮೂಲಕ ಉಗ್ರವಾದಿಗಳ ಸಂಚಿಗೆ ನೆರವಾಗುತ್ತಿದ್ದಾರೆ. ಇದು ಘೋರವಾದ ದೇಶದ್ರೋಹಕ್ಕೆ ಸಮವಾಗಿದೆ ಎಂದು ಬಿಜೆಪಿ ಖಂಡಿಸಿದೆ.
 ಈ ಸ್ಫೋಟದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಈ ವಿದ್ರೋಹದ ಹಿಂದಿರುವ ದುಷ್ಟ ಶಕ್ತಿಗಳನ್ನು ಶೀಘ್ರ ಬಂಧಿಸಬೇಕು. ಆಗ ಸಿದ್ದರಾಮಯ್ಯನವರ ಬಾಲಿಶ ಹೇಳಿಕೆಯ ಬಣ್ಣ ಬಯಲಾಗಲಿದೆ. ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಪರಾಧಿಗಳ ಪಟ್ಟಿಗೆ ಸಹಕರಿಸುವ ಉತ್ತಮ ಗುಣವನ್ನು ಪ್ರದರ್ಶಿಸಲಿ ಎಂದು ಜಿಲ್ಲಾ ಬಿಜೆಪಿ ಆಶಿಸಿದೆ ಎಂದು ಪಕ್ಷದ ಪತ್ರಿಕಾ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement