ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಶಿವಮೊಗ್ಗ: ವೇಗವಾಗಿ ಬಂದ ಲಾರಿಯೊಂದು ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎಂಆರ್ಎಸ್ ಬಳಿ ಗುರುವಾರ ನಡೆದಿದೆ.
ಕುಮಾರ ಪ್ರಭಾಕರ (44) ಮೃತಪಟ್ಟರು. ಇವರು ಶಿವಮೊಗ್ಗದಿಂದ ಹರಿಗೆ ಹೋಗುವಾಗ ಘಟನೆ ನಡೆದಿದೆ. ನಗರದಿಂದ ತಮ್ಮ ಕೆಲಸ ಮುಗಿಸಿ ಹರಿಗೆಯ ತಮ್ಮ ಮನೆಗೆ ತೆರಳುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಛತ್ತಿಸಗಡ ನೋಂದಣಿಯ ಲಾರಿ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ ಅವರ ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.