ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ

Lingaraj Badiger
Updated On : 19 Apr 2013, 10:55 am

ಸಾಗರ: ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸುವ ಸಲುವಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
 ಗುರುವಾರ ಕೇಂದ್ರ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕವಾಗಿರುವ ಸುಬ್ಬರಾವ್ ಬಲರಾಮ್ ಪಾಟೀಲ್ ಮತ್ತಿತರ ಚುನಾವಣಾ ಸಿಬ್ಬಂದಿ ಸ್ಟ್ರಾಂಗ್ ರೂಂ ಸೇರಿದಂತೆ ಚುನಾವಣಾ ತಯಾರಿ, ಮತಗಟ್ಟೆ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದಿಂದ ನೇಮಕವಾಗಿರುವ ಸುಬ್ಬರಾವ್ ಬಲರಾಮ್ ಪಾಟೀಲ್ ಅವರು ಮೇ 10ರವರೆಗೆ ಸಾಗರದಲ್ಲಿಯೆ ವಾಸ್ತವ್ಯ ಮಾಡಲಿದ್ದು, ಚುನಾವಣೆಗೆ ಸಂಬಂಧಪಟ್ಟಂತೆ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಲೋಪವಾದರೆ ಅವರ ಕುರಿತು ದೂರು ನೀಡಬಹುದು ಎಂದರು.
 ಏ. 20ರ ಮಧ್ಯಾಹ್ನ 3 ಗಂಟೆವರಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆ. ಅದೇ ದಿನ ಮಧ್ಯಾಹ್ನ 4ರ ನಂತರ ಅಭ್ಯರ್ಥಿಗಳು ಚಿಹ್ನೆಯನ್ನು ನೀಡಲಾಗುವುದು.
  ಪಾರದರ್ಶಕ ಹಾಗೂ ನಿರ್ಭೀತಿಯಿಂದ ಮತದಾನ ನಡೆಸುವುದು ನಮ್ಮ ಉದ್ದೇಶವಾಗಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದು, ನೀತಿಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement