ಸಾಗರದಲ್ಲಿ 11 ನಾಮಪತ್ರ ಪರಿಶೀಲನೆ
ಸಾಗರ: ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 11 ಜನರು ನಾಮಪತ್ರ ಸಲ್ಲಿಸಿದ್ದು, ಗುರುವಾರ ಪರಿಶೀಲನಾ ಕಾರ್ಯ ನಡೆಯಿತು.
ಕಾಗೋಡು ತಿಮ್ಮಪ್ಪ (ಕಾಂಗ್ರೆಸ್), ಶರಾವತಿ ಸಿ.ರಾವ್ (ಬಿಜೆಪಿ), ಗೋಪಾಲಕೃಷ್ಣ ಬೇಳೂರು (ಜೆಡಿಎಸ್), ಬಿ.ಆರ್. ಜಯಂತ್ (ಕೆಜೆಪಿ), ಟಿ.ಆರ್. ಕೃಷ್ಣಪ್ಪ ರಿಪ್ಪನಪೇಟೆ (ಲೋಕಸತ್ತಾ), ಕೆ.ಎನ್. ವೆಂಕಟೇಶ್ ಕೋಣನಕಟ್ಟೆ (ಬಿ.ಎಸ್.ಪಿ.), ಗಣೇಶ್ ಬಿ. ಬೆಳ್ಳಿ ರಿಪ್ಪನಪೇಟೆ (ಬಿ.ಎಸ್.ಆರ್.), ದಿನೇಶ್ ಬೆರದವಳ್ಳಿ (ಸಂಯುಕ್ತ ಜನತಾದಳ), ಸುರೇಶ್ ಸಿ. ಕೊಲ್ಲಿಕೊಪ್ಪ (ಪಕ್ಷೇತರ), ಎನ್. ಮೇಘರಾಜ್ ಪಕ್ಷೇತರ-ಐಡಿಪಿ ಬೆಂಬಲಿತ), ರಾಮಚಂದ್ರ ವಡ್ನಾಲ (ಪಕ್ಷೇತರ) ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು ಈ ಎಲ್ಲ ನಾಮಪತ್ರಗಳು ಸ್ವೀಕೃತವಾಗಿವೆ. ಇಂಡಿಯನ್ ಡೆಮಾಕ್ರೆಟಿಕ್‌ನಿಂದ ಕಣದಲ್ಲಿರುವ ಮೇಘರಾಜ್ ಎ ಬಿ ಫಾರಂ ಹೊಂದಿಲ್ಲದೆ ಇರುವುದರಿಂದ ಐಡಿಪಿಯಿಂದ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿ, ಪಕ್ಷೇತರವಾಗಿ ಸ್ಪರ್ಧಿಸಿದ್ದ ನಾಮಪತ್ರವನ್ನು ಪರಿಗಣಿಸಲಾಯಿತು.