ಇಂದಿನಿಂದ ಶ್ರೀರಾಮನವಮಿ ಸಂಗೀತೋತ್ಸವ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.19
ಕೀರ್ತಿಶೇಷ ಬಿ. ದೊರೆಸ್ವಾಮಿ ಅಯ್ಯಂಗಾರ್ ಟ್ರಸ್ಟ್ ಹಾಗೂ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯವು ಶ್ರೀ ರಾಮನವಮಿ ಸಂಗೀತೋತ್ಸವವನ್ನು ಏಪ್ರಿಲ್ 20ರಿಂದ 24ರ ವರೆಗೆ ಹಮ್ಮಿಕೊಂಡಿದೆ.
ನಗರದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ 6.30ರಿಂದ ಕಾರ್ಯಕ್ರಮ ನಡೆಯಲಿದ್ದು, ಪ್ರಮುಖ ಸಂಗೀತ ಕಲಾವಿದರು ಕಾರ್ಯಕ್ರಮ ಪ್ರಸ್ತುತಪಡಿಸುವವರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದೆ.
ಏ.20ರ ಶನಿವಾರ ಸಂಜೆ 6.30ಕ್ಕೆ ವಿದ್ವಾನ್ ಪದ್ಮಶ್ರೀ ರಘುನಂದನ್ ಹಾಗೂ ವಿದ್ವಾನ್ ಗೋದಾ ಮನು ಅವರಿಂದ ದ್ವಂದ್ವ ಹಾಡುಗಾರಿಕೆ ಇದ್ದು, ವಿದ್ವಾನ್ ಮತ್ತೂರು ಮಧುಮುರಳಿ (ವಯೋಲಿನ್), ವಿ ವಿ.ಎಸ್. ರಾಜಗೋಪಾಲ್ (ಮೃದಂಗ), ಎಸ್.ನಿಖಿಲ್ ಕುಮಾರ್ (ಘಟ) ವಾದ್ಯ ಸಹಕಾರ ನೀಡುವರು.
21ರಂದು ಸಂಜೆ ವಿ ಕೋಡಂಪಲ್ಲಿ ಶ್ರೀರಂಜಿನಿಯವರಿಂದ ಹಾಡುಗಾರಿಕೆ ಇದ್ದು, ವಿ ಹೊಸಹಳ್ಳಿ ವಿ. ರಘುರಾಮ್ (ವಯೋಲಿನ್), ವಿ ವಿ.ಎಸ್. ರಾಜಗೋಪಾಲ್ (ಮೃದಂಗ), ಬಿ.ಆರ್. ಶ್ರೇಯಸ್ (ಘಟ) ವಾದ್ಯ ಸಹಕಾರ ನೀಡಲಿದ್ದಾರೆ.
22ರಂದು ಮೈಸೂರಿನ ವಿ ಶೈಲಜಾ ಶ್ರೀರಾಮಭಟ್ ಅವರ ಹಾಡುಗಾರಿಕೆ ಇದ್ದು, ವಿ ಹೊಸಹಳ್ಳಿ ವಿ. ರಘುರಾಮ್, ವಿ ಬಿ. ಶ್ರೀರಾಮ ಭಟ್, ಎಸ್. ನಿಖಿಲ್ ಕುಮಾರ್ ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ.
23ರಂದು ವಿ ಸುಚೇತನ ರಂಗಸ್ವಾಮಿಯವರಿಂದ ಹಾಡುಗಾರಿಕೆ ಇದ್ದು, ವಿ ಸಿಂಧು ಸುಚೇತನ್ (ವಯೋಲಿನ್), ವಿ ಅನಿರುದ್ಧ ಭಟ್ (ಮೃದಂಗ), ಎಸ್.ನಿಖಿಲ್ ಕುಮಾರ್ (ಘಟ) ವಾದ್ಯ ಸಹಕಾರ ನೀಡುವರು. 24ರಂದು ನಡೆಯುವ ಕಾರ್ಯಕ್ರಮದಲ್ಲಿ ವಿ ಸಿಂಧು ಸುಚೇತನ್ ಹಾಗೂ ವಿ ಸ್ಮಿತಾ ದ್ವಂದ್ವ ವಯೋಲಿನ್ ವಾದನವಿರುತ್ತದೆ. ವಿ ಅನಿರುದ್ಧ ಭಟ್ ಮೃದಂಗ ಹಾಗೂ ಬಿ.ಆರ್. ಶ್ರೇಯಸ್ (ಘಟ) ವಾದ್ಯ ಸಹಕಾರ ನೀಡಲಿದ್ದಾರೆ.
ಬ್ರಹ್ಮ ರಥೋತ್ಸವ: ಭದ್ರಾವತಿ ತಾಲೂಕು ಸೈದರಕಲ್ಲಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಗ್ರಾಮೋತ್ಸವ ಸಮಿತಿಯು ಏ.25ರಂದು ರಥೋತ್ಸವ ಹಮ್ಮಿಕೊಂಡಿದೆ. 24ರಂದು ಕುದುರೆ ಉತ್ಸವವಿದ್ದು, 25ರಂದು ಬೆಳಿಗ್ಗೆ 4.30ಕ್ಕೆ ಕಲ್ಯಾಣೋತ್ಸವ, 6.30ರಿಂದ ರಥೋತ್ಸವ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.