ಕ್ಷೇತ್ರಕ್ಕೆ ಮಸಿ ಬಳಿದ ಹಾಲಪ್ಪ; ಮಧು
ಕ.ಪ್ರ.ವಾರ್ತೆ, ಸೊರಬ, ಏ.19
ಸತತ 40ಕ್ಕೂ ಹೆಚ್ಚು ವರ್ಷಗಳ ಕಾಲ ತಾಲೂಕಿನ ಮುಕುಟದಂತಿದ್ದ ಎಸ್. ಬಂಗಾರಪ್ಪ ದೇಶ ಮಟ್ಟದಲ್ಲಿ ಖ್ಯಾತಿ ತಂದರೆ ಈ ಹಿಂದೆ ಆಯ್ಕೆಯಾದ ಶಾಸಕ ಕೇವಲ 4 ವರ್ಷದಲ್ಲಿ ಕುಖ್ಯಾತಿ ಗಳಿಸಿ ತಾಲೂಕಿಗೆ ಮಸಿ ಬಳಿದರು ಎಂದು ಜೆಡಿಎಸ್ ಸೊರಬ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪ ಟೀಕಿಸಿದರು.
ತಾಲೂಕು ಗ್ರಾಮಾಂತರ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸುತ್ತಿರುವ ಅವರು ಆಡಳಿತ ಸರ್ಕಾರ, ಕೆಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಹಿಂದೆ ರಾಜಕೀಯವಾಗಿ ಬೆಳೆಸಿದ ಕುಮಾರ್ ಬಂಗಾರಪ್ಪ, ಹಾಲಪ್ಪ ನಮ್ಮ ತಂದೆಯವರ ಕುರಿತು ಹಗುರ ಮಾತನಾಡುತ್ತಿದ್ದಾರೆ. ಅನಾವಶ್ಯಕ ಸುಳ್ಳು ಆರೋಪ ಮಾಡುತ್ತ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಎಚ್. ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ. ರುದ್ರಗೌಡ, ಜಿಲ್ಲಾ ಉಪಾಧ್ಯಕ್ಷ ಎನ್. ಕುಮಾರ್, ಎಂ.ಡಿ. ಶೇಖರ್, ಶ್ರೀಪಾದರಾವ್ ನಿಸರಾಣಿ, ಮಾಕೊಪ್ಪದ ಫಕ್ಕೀರಪ್ಪ, ಕಲ್ಲಂಬಿ ಹಿರಿಯಣ್ಯಪ್ಪ, ಪಕ್ಷದ ತಾಲೂಕು ಘಟಕದ ಯುವಾಧ್ಯಕ್ಷ ಬಸವೇಶ್ವರ, ಆನವಟ್ಟಿ, ಜೆಡೆ, ಕುಪ್ಪಗಡ್ಡೆ, ಚಂದ್ರಗುತ್ತಿ ಮುಂತಾದ ಹೋಬಳಿಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.