ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚುನಾವಣೆ ಹಿನ್ನೆಲೆ: ಅಧಿಕಾರಿಗಳ ವರ್ಗಾವಣೆ

Lingaraj Badiger
Updated On : 20 Apr 2013, 10:55 am

ಶಿವಮೊಗ್ಗ: ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಸರ್ಕಾರ ಜಿಲ್ಲೆಯ ನಾಲ್ವರು ಸರ್ಕಲ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ.
ಹೊಸನಗರದ ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್, ಶಿವಮೊಗ್ಗ ಎಸ್ಪಿ ಕಚೇರಿಯ ಜಿಲ್ಲಾ ವಿಶೇಷ ವಿಭಾಗದ ಡಿ. ನಾಗರಾಜ್, ಸಾಗರದ ಮಂಜಪ್ಪ ಹಾಗೂ ಸೊರಬ ವೃತ್ತ ನಿರೀಕ್ಷಕ ಲಿಂಗದಾಳು ವರ್ಗಾವಣೆಗೊಂಡ ಅಧಿಕಾರಿಗಳು. ಬೇರೆ ಜಿಲ್ಲೆಗಳಿಗೆ ಈ ನಾಲ್ವರು ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.  ಈ ನಡುವೆ ಖಾಲಿ ಬಿದ್ದಿದ್ದ ಸಾಗರ ಉಪ ವಿಭಾಗದ ಡಿವೈಎಸ್ಪಿ ಸ್ಥಾನಕ್ಕೆ ಎಂ.ಕೆ. ವಿಶ್ವನಾಥ್ ನಾಯ್ಕ ಅವರನ್ನು ನಿಯೋಜಿಸಲಾಗಿದೆ.
ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶರಣಪ್ಪ ಅವರು ಸಾಗರ ಉಪ ವಿಭಾಗದ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಸರ್ಕಾರ ಅವರನ್ನು ಗದಗ ಜಿಲ್ಲೆಯ ಎಸ್ಪಿಯಾಗಿ ನೇಮಿಸಿತ್ತು.
ಸಿಇಓ ವರ್ಗ: ಶಿವಮೊಗ್ಗ ನಗರಸಭೆ ಆಯುಕ್ತ ಎಂ.ಆರ್. ರವಿಯವರನ್ನು ಬೆಳಗಾವಿಗೆಗೆ ವರ್ಗಾವಣೆ ಮಾಡಿದ ಬೆನ್ನಲ್ಲೆ ಇದೀಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ವರ್ಗಾಯಿಸಲಾಗಿದೆ. ಚುನಾವಣಾ ಆಯೋಗದ ಆದೇಶದಂತೆ ಶಶಿಕಾಂತ್ ಸೆಂಥಿಲ್‌ರನ್ನು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement