ಟ್ರ್ಯಾಕ್ಟರ್ ಡಿಕ್ಕಿ: ಮಗು ಸಾವು
ಸೊರಬ: ಆನವಟ್ಟಿ ಸಮೀಪದ ಕೋಡಿಕೊಪ್ಪ ಗ್ರಾಮದ ಬಳಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಅಸುನೀಗಿದೆ.
ಅಂಕಿತಾ(3) ತನ್ನ ಮನೆಯ ಬಳಿಯ ರಸ್ತೆಯಲ್ಲಿ ಆಡುತ್ತಿದ್ದಾಗ ಜಡೆ ಗ್ರಾಮದ ಕಡೆಯಿಂದ ಬಂದ ಟ್ರ್ಯಾಕ್ಟರ್ ಆಕೆಗೆ ಡಿಕ್ಕಿ ಹೊಡೆದಿದೆ. ಕೂಡಲೆ ಸಮೀಪದ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.