ಪ್ರಾಣಾಯಾಮ ಶಿಬಿರ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 22ರಿಂದ 30ರವರೆಗೆ 10 ದಿನಗಳ ಯೋಗ-ಪ್ರಾಣಾಯಾಮ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ನೆಹರೂ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ 7ರವರೆಗೆ ಪುರುಷರಿಗಾಗಿ ಮತ್ತು ಸಂಜೆ 4.30ರಿಂದ 5.30ರವರೆಗೆ ಮಹಿಳೆಯರಿಗಾಗಿ ಶಿಬಿರ ನಡೆಯುವುದು. ಅನಿಲ್‌ಕುಮಾರ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಮಾಹಿತಿಗಾಗಿ ಮೊ.9886674375.
ಅರ್ಜಿ ಆಹ್ವಾನ
ಶಿವಮೊಗ್ಗ: ಭಾರತೀಯ ಭೂಸೇನೆಯಲ್ಲಿ ಖಾಲಿ ಇರುವ ಜೂನಿಯರ್ ಕಮಿಷನ್ ಆಫೀಸರ್ಸ್ ಗ್ರೇಡಿನ 50-ಪಂಡಿತ, 5-ಮೌಲ್ವಿ ಹಾಗೂ 5-ಪಾದ್ರಿ ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಪ್ರಿಲ್ 25 ಅರ್ಜಿ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ಭಾರತೀಯ ಭೂಸೇನೆಯ ಶಿಕ್ಷಣ ವಿಭಾಗದಲ್ಲಿ ಖಾಲಿ ಇರುವ ಹವಾಲ್ದಾರ್ ಎಜುಕೇಶನ್‌ನ ವಿಜ್ಞಾನ ವಿಭಾಗ-122 ಹಾಗೂ ಆರ್ಟ್ಸ್ ವಿಭಾಗದ 40- ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೆಡ್‌ಕ್ವಾಟರ್ ರಿಕ್ರೂಟಿಂಗ್ ಜ್ಹೋನ್, ಫೀಲ್‌ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ರಸ್ತೆ, ಬೆಂಗಳೂರು-25 ಕಚೇರಿಯನ್ನು ಸಂಪರ್ಕಿಸುವಂತೆ ಮಂಗಳೂರು ಭೂಸೇನಾ ನೇಮಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.