25ರಂದು ಮಾಸಿಕ ಶಿವಾನುಗೋಷ್ಠಿ
ಶಿವಮೊಗ್ಗ: ಶ್ರೀ ಬೆಕ್ಕಿನಕಲ್ಮಠ ಏಪ್ರಿಲ್ 25ರಂದು ಸಂಜೆ 6.30ಕ್ಕೆ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ 399ನೇ ಮಾಸಿಕ ಶಿವಾನುಗೋಷ್ಠಿ ಏರ್ಪಡಿಸಿದೆ. ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮುಖ್ಯಅತಿಥಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಅನ್ವಹಿಕ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಸ್. ಚಂದ್ರಶೇಖರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಪಾಟೀಲ್ ಪಾಲ್ಗೊಳ್ಳುವರು. ಪಿಇಎಸ್ಪಿಯು ಕಾಲೇಜು ಪ್ರಾಂಶುಪಾಲ ಡಾ.ಕೆ. ಶಿವಕುಮಾರ್ ವಿಜ್ಞಾನದ ಅನುಕೂಲಗಳು ಮತ್ತು ಅನಾನುಕೂಲಗಳು ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಶಾಶ್ವತಿ ಮಹಿಳಾ ವೇದಿಕೆ ಲಲಿತಮ್ಮ ಮತ್ತು ಶಿವಲೀಲಾ ಅವರಿಂದ ಸಂಗೀತ ಕಚೇರಿ ನಡೆಯಲಿದೆ ಎಂದು ಮಠ ತಿಳಿಸಿದೆ.