ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆಜೆಪಿಗೆ ಅದೃಶ್ಯ ಮತದಾರರ ಬೆಂಬಲ: ಜಯಂತ್

Rashmi Kasaragodu
Updated On : 21 Apr 2013, 12:43 pm

ಸಾಗರ: ಕ್ಷೇತ್ರವ್ಯಾಪ್ತಿಯಲ್ಲಿ ಕೆಜೆಪಿಗೆ ಅದೃಶ್ಯ ಮತದಾರರ ಬೆಂಬಲಿವಿದೆ ಎಂದು ಪಕ್ಷದ ಅಭ್ಯರ್ಥಿ ಬಿ.ಆರ್.ಜಯಂತ್ ಹೇಳಿದರು.
 ಪಟ್ಟಣದಲ್ಲಿ ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜನ ಈ ಬಾರಿ ಬದಲಾವಣೆ ಬಯಸಿದ್ದು ಒಂದು ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ವಾತಾವರಣ ಎಲ್ಲಾ ಕಡೆ ಕಂಡು ಬರುತ್ತಿದೆ ಎಂದರು.
ಕೆಜೆಪಿಗೇ ಜಯ: ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಈಗಾಗಲೆ ಎರಡು ಸುತ್ತಿನ ಪ್ರವಾಸ ಮುಗಿಸಿದ್ದು, ಮತದಾರರು ಸಭೆಗಳಲ್ಲಿ, ಮತಯಾಚನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತೋರಿಸುತ್ತಿರುವ ಉತ್ಸಾಹದಿಂದ ಪಕ್ಷ ಖಂಡಿತಾ ಗೆಲ್ಲುತ್ತದೆ ಎನ್ನುವ ವಿಶ್ವಾಸ ವ್ಯಕ್ತವಾಗುತ್ತಿದೆ. ಯಡಿಯೂರಪ್ಪನವರಿಗೆ ಹಿಂದಿನ ಪಕ್ಷಗಳು ಮಾಡಿರುವ ಮೋಸ, ಸ್ವಪಕ್ಷೀಯರೆ ಮಾಡಿದ್ದ ಅನ್ಯಾಯದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
 ಯಡಿಯೂರಪ್ಪ ನಾಯಕತ್ವದಲ್ಲಿ ರಾಜ್ಯದಲ್ಲಿ ಕೆಜೆಪಿ ಅತಿಹೆಚ್ಚು ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ. ಕೆಜೆಪಿ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಜೊತೆಗೆ, ಮಲೆನಾಡು ಭಾಗದ ಅಡಿಕೆ ಕೃಷಿಕರ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡುತ್ತದೆ ಎಂದರು.
ಕಾಂಗ್ರೆಸ್‌ನಲ್ಲಿ ಕಿತ್ತಾಟ: ಪಕ್ಷದ ಮುಖಂಡ ಟಿ.ಡಿ.ಮೇಘರಾಜ್ , ಈಗಾಗಲೆ ರಾಜ್ಯದಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದ್ದು, ಜೆಡಿಎಸ್ ಸೀಮಿತ ಪ್ರದೇಶಗಳಲ್ಲಿ ಮಾತ್ರ ತನ್ನ ಅಸ್ತಿತ್ವ ಕಂಡುಕೊಂಡಿದೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಾಯಕರ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಆದರೆ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸಂಘಟನೆ ನೋಡಿ ಬೇರೆಬೇರೆ ಪಕ್ಷದ ಅನೇಕ ಮುಖಂಡರು ಪಕ್ಷ ಸೇರ್ಪಡೆಗೊಳ್ಳಲು ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಿದರು.
 ಮುಖಂಡರಾದ ವಿ.ಮಹೇಶ್, ಕೆ.ಆರ್.ಗಣೇಶಪ್ರಸಾದ್, ಸರಸ್ವತಿ ನಾಗರಾಜ್, ವಾದಿರಾಜ್, ಸೋಮಶೇಖರ ವೀರಾಪುರ, ರತ್ನಾಕರ ಶೇಟ್, ರಾಮಣ್ಣ ಗಾಣಿಗ, ಮರಳುಸಿದ್ದಪ್ಪ, ರಾಧಾಕಣಷ್ಣ ಬೇಂಗ್ರೆ, ಪ್ರಕಾಶ ಕುಂಠೆ, ಗದಿಗೇಶ್, ನಾಗರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement