ಟ್ಯಾಂಕರ್ ನೀರು ಪೂರೈಕೆ
ಸಾಗರ: ಪಟ್ಟಣದ ಕುಡಿಯುವ ನೀರಿನ ಸಂಗ್ರಹಗಾರ ಬಸವನ ಹೊಳೆ ಡ್ಯಾಂ ಸಂಪೂರ್ಣ ಖಾಲಿಯಾಗಿರುವ ಕಾರಣದಿಂದ ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ ಏ. 19 ರಿಂದ ನಲ್ಲಿ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. 31 ವಾರ್ಡ್ಗಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರಾದ ಕೆ. ನರಸಿಂಹಮೂರ್ತಿ ಕೋರಿದ್ದಾರೆ.