ನಾಳೆ ರಾಜನಾಥ್ ಸಿಂಗ್ ಪ್ರಚಾರ
ಸಾಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಸಾಗರ ಪಟ್ಟಣದ ಗಾಂಧೀ ಮೈದಾನದಲ್ಲಿ ಏ. 22ರ ಸಂಜೆ 4ಕ್ಕೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿ ತಾ. ಅಧ್ಯಕ್ಷ ಯು.ಎಚ್.ರಾಮಪ್ಪ ಹೇಳಿದರು.
ಸಾಗರಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದು ಅವರಿಗೇ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿಯಾಗಿ ಶರಾವತಿ ಸಿ. ರಾವ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಾರ್ಯಕರ್ತರು ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ಹಗಲು-ರಾತ್ರಿ ದುಡಿಯುತ್ತಿದ್ದಾರೆ ಎಂದರು.
ಬಿಜೆಪಿಗೇ ಜಯ: ಕಳೆದ ಅವಧಿಯಲ್ಲಿ ಬಿಜೆಪಿ ಜನಪರ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿ ಐದು ವರ್ಷ ಪೂರೈಸಿದೆ. ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೂ ಸಹ ತುಮರಿ ಸೇತುವೆ, ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲಾಕಾಲೇಜು ಕಟ್ಟಡ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಿರುವುದು ಅಭ್ಯರ್ಥಿ ಶರಾವತಿ ಸಿ.ರಾವ್ ಅವರ ಗೆಲುವಿಗೆ ನೆರವಾಗಲಿದೆ ಎಂದರು.
ಕ್ಷೇತ್ರದಲ್ಲಿ ಎರಡು ಬಾರಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿದ್ದೇನೆ ಎಂದು ಹೇಳುತ್ತಿರುವ ಗೋಪಾಲಕೃಷ್ಣ ಬೇಳೂರು ಈ ಬಾರಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ರಾಮಪ್ಪ, ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದರು. ಪಕ್ಷದ ಪ್ರಮುಖರಾದ ಎಸ್.ವಿ.ಕೃಷ್ಣಮೂತರ್, ವ.ಶಂ.ರಾಮಚಂದ್ರ ಭಟ್, ಸಂತೋಷ್ ಆರ್. ಶೇಟ್, ಸತೀಶಬಾಬು, ಚೇತನರಾಜ್, ಕಸ್ತೂರಿ ನಾಗರಾಜ್, ಶ್ರೀನಿವಾಸ್, ಸಿ.ಅರವಿಂದ ರಾಯ್ಕರ್ ಇದ್ದರು.