ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಾಡಿಗೆ ಜನರನ್ನು ಸಭೆಗೆ ತರುತ್ತಿರುವ ರಾಜಕಾರಣಿ

Rashmi Kasaragodu
Updated On : 21 Apr 2013, 12:43 pm

ಕ.ಪ್ರ.ವಾರ್ತೆ, ಸೊರಬ: ಹಣ ಮತ್ತು ತೋಳ್ಬಲದಿಂದ ಏನು ಬೇಕಾದರೂ ಮಾಡಬಹುದು ಎಂಬ ಭ್ರಮೆಯುಳ್ಳ ರಾಜಕಾರಣಿ ತಾಲೂಕಿನಲ್ಲಿ ತಲೆ ಎತ್ತುವ ಪ್ರಯತ್ನ ಮಾಡುತ್ತಿದ್ದಾರೆ ಎಚ್ಚರವಿರಲಿ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.
 ಶನಿವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅವರು ನಡೆಸಿದ ಕಾರ್ಯಕರ್ತರ ಸಭೆ ಮತ್ತು ವಿವಿಧ ಪಕ್ಷಗಳವರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಇಂತಹ ಹಣವೇ ಪ್ರಧಾನ ಎನ್ನುವ ರಾಜಕಾರಣಿ ಬಾಡಿಗೆ ಜನರನ್ನು ತಂದು ಬೃಹತ್ ಸಭೆ ನಡೆಸುವುದರ ಜೊತೆಗೆ ಅನುಕಂಪ ಗಿಟ್ಟಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿರುವುದು ಕಂಡುಬರುತ್ತಿದೆ. ಇಂತವರಿಗೆ ಜನ  ಮುಖ್ಯವಲ್ಲ. ಅಧಿಕಾರವೇ ಮುಖ್ಯ. ಹೀಗಿದ್ದಾಗ ಇಂತವರಿಂದ ತಾಲೂಕಿನ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೆಸರು ಹೇಳದೆ ಟೀಕಿಸಿದರು.
ಕಾರ್ಯಕ್ರಮ ಯಶಸ್ವಿ: ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿ ಬದುಕುತ್ತಿರುವವರಿಗೆ ಯಾವುದೇ ಸರ್ಕಾರ ಯೋಜಿಸುವ ಯೋಜನೆಗಳು ಅವರ ಮನೆ ಬಾಗಿಲಿಗೆ ತಲುಪಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಅಂತಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ರಾಜಕಾರಣಿ ಮಾತ್ರ ನಿಜವಾದ ರಾಜಕಾರಣಿ ಆಗುತ್ತಾನೆ.
 ಈ ನಿಟ್ಟಿನಲ್ಲಿ ನಾವು ಈ ಹಿಂದೆ ರೂಪಿಸಿದ ನೀರಾವರಿ ಪರಿಕಲ್ಪನೆಗಳು ಜನರನ್ನು ತಲುಪಿದ್ದು, ಸಂತೃಪ್ತರಾಗಿದ್ದಾರೆ ಎಂದರು.
  ಭವಿಷ್ಯದಲ್ಲಿ ಇನ್ನಷ್ಟು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಉದ್ದೇಶವಿದೆ. ಕೃಷಿಕನ ಬವಣೆ  ನೀಗಿಸುವ ನಿಟ್ಟಿನಲ್ಲಿ ಕೃಷಿ ನೀತಿಯ ಬದಲಾವಣೆಯೂ ಅಗತ್ಯವಿದೆ ಎಂಬುದನ್ನು ಕಾಂಗ್ರೆಸ್ ಮನಗಂಡಿದ್ದು, ಮತದಾರರ ಸಹಕಾರ ಅಗತ್ಯವಿದೆ. ಹಾಗಾಗಿ ಅನವಶ್ಯಕ ಕೊಡುವೆ, ಹೆಂಡ, ಹಣದ ಆಮಿಷಕ್ಕೆ ಬಲಿಯಾಗದೆ ಪ್ರಾಮಾಣಿಕ ಅಭ್ಯರ್ಥಿಯನ್ನೂ ಚುನಾಯಿಸುವ ಕಾರ್ಯವಾಗಬೇಕಿದೆ, ದೃಡ ಮನಸ್ಸಿನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ನಾಯಕನನ್ನು ಆರಿಸುವಂತಾಗಲಿ ಎಂದು ಆಶಿಸಿದರು.
ಕಾಂಗೇಸ್ ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿದರು. ಇದೇ ವೇಳೆ ಬೇರೆಬೇರೆ ಪಕ್ಷಗಳ ಅನೇಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
 ಮಹಿಳಾ ಘಟಕದ ಅಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ರೇವಣಪ್ಪ, ಮುಖಂಡ  ಎಲ್. ಗಿರೀಶ್ ಶೇಠ್, ಎಂ.ಡಿ.ಉಮೇಶ್, ಜಿ. ಕೆರೆಯಪ್ಪ, ಟಿ.ಆರ್. ಸುರೇಶ್, ಡಿ.ಬಿ.ಮಂಜಪ್ಪ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement