ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುತ್ತಿದೆ: ವಿಷಾದ

Rashmi Kasaragodu
Updated On : 21 Apr 2013, 12:43 pm

ಸಾಗರ: ಶಿಕ್ಷಣ ಸಂಸ್ಥೆಗಳು ಪದವಿಧರರನ್ನು ತಯಾರಿಸುವ ಕಾರ್ಖಾನೆಯಾಗಿ ರೂಪುಗೊಳ್ಳದೆ ಭವಿಷ್ಯ ನಿರ್ಮಿಸುವ ಸತ್ಪ್ರಜೆಗಳನ್ನು ತಯಾರಿಸುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕು ಎಂದು ಜನಪದಶ್ರೀ ಪ್ರಶಸ್ತಿ ಪುರಸ್ಕೃತ ಯುಗಧರ್ಮ ರಾಮಣ್ಣ ಅಭಿಪ್ರಾಯಪಟ್ಟರು.
 ಇಲ್ಲಿನ ಎಲ್.ಬಿ.ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾಥರ್ ವೇದಿಕೆಯ ಸಮಾರೋಪದಲ್ಲಿ, ಪ್ರಸ್ತುತ ಲೌಕಿಕ ಲೋಕಾನುಭವ, ಅಲೌಕಿಕ ಅಪರೋಕ್ಷ ಅನುಭವವುಳ್ಳ ಶಿಕ್ಷಣ ಅಗತ್ಯ ಎಂದರು.
ಶಿಕ್ಷೆ-ಶಿಕ್ಷಣ: ಗುರುಕುಲ ಪದ್ದತಿಯಿಂದ ಹಿಡಿದು 19ನೇ ಶತಮಾನದ ಅಂತ್ಯದವರೆಗೂ ಶಿಕ್ಷಣ ಎನ್ನುವುದು ಪವಿತ್ರ ಕ್ಷೇತ್ರವಾಗಿತ್ತು. 20 ರಿಂದ 21ನೇ ಶತಮಾನಕ್ಕೆ ಕಾಲಿಡುತ್ತಿದ್ದಂತೆ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುತ್ತಿದೆ ಎಂದರು.
 ವಿದ್ಯಾರ್ಥಿಗಳಲ್ಲಿ ಕಾಲ ಕಳೆಯಲು ಕಾಲೇಜು ಎನ್ನುವ ಮನೋಭಾವ ಬಂದಿದೆ. ಶಿಕ್ಷೆ ಹಾಗೂ ಶಿಕ್ಷಣ ಒಟ್ಟೊಟ್ಟಿಗೆ ಹೋದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
 ಪ್ರಾಚಾರ್ಯ ಪ್ರೊ. ಬಿ.ಸಿ.ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿಯ ಅಂತರಾಷ್ಟ್ರೀಯ ಕಬಡ್ಡಿ ಪಟು ಎಚ್.ಎನ್.ಕೃಷ್ಣೇಗೌಡ, ಮಲೆನಾಡು ಅಭಿವೃದ್ದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ವಿ.ಮೋಹನ್, ಸಹ ಕಾರ್ಯದರ್ಶಿ ಬಿ.ವಿ.ದೀಪಕ್, ಪ್ರೊ. ಶಿವಣ್ಣ, ಪ್ರೊ. ಬೆಟ್ಟಸ್ವಾಮಿ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement