ಚಿತ್ರಕಲೆ ಕ್ರಾಫ್ಟ್ ತರಬೇತಿ
ಶಿವಮೊಗ್ಗ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಏ. 22ರಿಂದ 27ರವರೆಗೆ ರವೀಂದ್ರ ನಗರದ ಬಸವ ಸದನದಲ್ಲಿ ಉಚಿತ ಚಿತ್ರಕಲೆ ಕ್ರಾಫ್ಟ್ ತರಬೇತಿ ಏರ್ಪಡಿಸಲಿದೆ. ಆಸಕ್ತರು ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಗಳಿಗಾಗಿ- 9379156680.
ಜಾತ್ರಾ ಮಹೋತ್ಸವ
ಶಿವಮೊಗ್ಗ: ಶಿಕಾರಿಪುರದ ಶಿವನಪಾದ ಕ್ಷೇತ್ರದಲ್ಲಿ ಏ.23 ರಿಂದ 25ರವರೆಗೆ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದೆ. 23ರಂದು ಬೆಳಗ್ಗೆ 8ಗಂಟೆಗೆ ಶಿವಧ್ವಜಾರೋಹಣ, ಸಂಜೆ 5ಕ್ಕೆ ಸ್ವಾಮಿಯ ಅಭಿಷೇಕ, ಕಂಕಣಪೂಜೆ, ಕಳಸ ಪೂಜೆ, ಶಿವನಾಮವಳಿ, ಮಹಾಮಂಗಳರಾತಿ, 24 ರಂದು ಸದಾಶಿವಪ್ಪ ಬಣಕಾರ್ ಅವರಿಂದ ಶಿವಧ್ವಜರೋಹಣ, 25ರಂದು ಬೆಳಿಗ್ಗೆ 10ಕ್ಕೆ ಮಾಯತಮ್ಮನ ಮುಚುಡಿ ಗ್ರಾಮದ ಭಕ್ತರಿಂದ ರಥಸೇವೆ, 12.30ಕ್ಕೆ ಇಕ್ಕದ ಮಾರಯ್ಯನ ಮಹಾಮಂಟಪದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಜೀವಮಾನ ಸಾಧನೆ ಪ್ರಶಸ್ತಿ
ಶಿವಮೊಗ್ಗ: ಕರ್ನಾಟಕ ಸಂಘ 2013ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಅವಲೋಕಿಸಿ ಗಣ್ಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಘೋಷಿಸಿದೆ. ಸಂಶೋಧನೆ ವಿಭಾಗದಿಂದ ಡಾ. ಡಿ.ಎನ್. ಶಂಕರಭಟ್, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಎಂ.ವಿ. ನಾಗರಾಜರಾವ್, ಕಾವ್ಯದಿಂದ ಡಾ.ಬಿ.ಎ. ಸನದಿ, ವಿಮರ್ಶೆಯಲ್ಲಿ ಡಾ.ಎ.ಎಸ್. ವೇಣುಗೋಪಾಲರಾವ್ ಅವರಿಗೆ ಪ್ರಶಸ್ತಿ ಪ್ರಕಟಿಸಿದೆ. ಪ್ರಶಸ್ತಿ ರು. 10,000 ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಸಂಘದ ಗೌರವ ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ.
ನ್ಯೂಟೌನ್ನಲ್ಲಿ ಶ್ರೀರಾಮೋತ್ಸವ
ಭದ್ರಾವತಿ: ಶ್ರೀ ರಾಮನವಮಿ ಅಂಗವಾಗಿ ಪಟ್ಟಣದ ನ್ಯೂಟೌನ್ನಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ರಾಮೋತ್ಸವದ ರಾಮತಾರಕ ಹೋಮ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶಾರದಾ ಹೋಮ ಇತ್ಯಾದಿ ಧಾರ್ಮಿಕ ಕೈಂಕರ್ಯಗಳನ್ನು ಶಿವರಾಮ ಶಾಸ್ತ್ರಿಗಳು ಹಾಗೂ ಮೋಹನ ಶಾಸ್ತ್ರಿಗಳು ನಡೆಸಿಕೊಟ್ಟರು.
ಬೆಳಗ್ಗೆ ಹೋಮಗಳು ನಡೆದು ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು.
ರಾಮಸ್ವಾಮಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು. ದಾನಿಗಳನ್ನು ಈ ಸಂದರ್ಭದಲ್ಲಿ ದೇವಾಲಯ ಸಮಿತಿಯವರು ಸನ್ಮಾನಿಸಿದರು.