ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿರ್ಮಾಣ ಆಗಲಿದೆ ವಿಶ್ವದ ಅತಿದೊಡ್ಡ ಶ್ರೀ ಕೃಷ್ಣದೇವಾಲಯ

Vishwanath S
Updated On : 23 Apr 2013, 2:12 am

ಕ.ಪ್ರ.ವಾರ್ತೆ  ,   ತೀರ್ಥಹಳ್ಳಿ  ,   ಏ.22
ಸಮೀಪದ ಚಕ್ಕೋಡಬೈಲಿನಲ್ಲಿ ವಿಶ್ವದ ಅತಿದೊಡ್ಡ ಶ್ರೀ ಕೃಷ್ಣದೇವಾಲಯ ನಿರ್ಮಿಸಲಾಗುವುದು ಎಂದು ಅಂತಾರಾಷ್ಟ್ರೀಯ ಶ್ರೀ ಕೃಷ್ಣ ಟೆಂಪಲ್ ಪೇಟೇಮಠ ಟ್ರಸ್ಟಿನ ಕಾರ್ಯಾಧ್ಯಕ್ಷ ಎಚ್. ಮಹಾರಾಜ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಪೇಟೆ ಮಠದಲ್ಲಿ ಈಗಾಗಲೇ ಇತಿಹಾಸ ಪ್ರಸಿದ್ಧ ಶಕ್ತಿಪೀಠದಲ್ಲಿ ಪುರಾತನ ಕಾಲದ ಚಾಮುಂಡೇಶ್ವರಿ ಕಾಶಿ ವಿಶ್ವೇಶ್ವರ ದೇವಸ್ಥಾನಗಳಿವೆ. ಕಾಶಿ ವಿಶ್ವೇಶ್ವರ ದೇವರ ಸನ್ನಿದಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದೆ. ಈ ಕ್ಷೇತ್ರ ಕಳೆದ 400 ವರ್ಷಗಳ ಕಾಲದಲ್ಲಿ ಒಂದಿಷ್ಟು ಅವನತಿಹೊಂದಿತ್ತಾದರೂ, ಇದೀಗ ಜೀರ್ಣೋದ್ಧಾರಗೊಂಡು  ಮರುಹುಟ್ಟು ಪಡೆದಿದೆ. ಸುಮಾರು 10 ಎಕರೆ ವಿಸ್ತಾರ ಸುಂದರ ಮಲೆನಾಡಿನ ಪರಿಸರದಲ್ಲಿ ಈ ಶಕ್ತಿ ಪೀಠವಿದ್ದು, ಇದೀಗ 2000ಕೋಟಿ ವೆಚ್ಚದಲ್ಲಿ ಭವ್ಯವಾದ ಶ್ರೀ ಕೃಷ್ಣದೇವಾಲಯ ನಿರ್ಮಿಸಲಾಗುವುದು. ನಿರ್ಮಾಣಕ್ಕೆ ಮಾರ್ಬಲ್ ಶಿಲೆ ಬಳಸಲಾಗುವುದು ಎಂದು ತಿಳಿಸಿದರು.
 ಈ ಕ್ಷೇತ್ರದ ಭಕ್ತರು ವಿಶ್ವದೆಲ್ಲೆಡೆ ಇದ್ದು, ನಿರ್ಮಾಣ ಕಾರ್ಯಕ್ಕೆ ನೆರವು ನೀಡಲಿದ್ದಾರೆ. ದೇಣಿಗೆ ಸ್ವೀಕರಿಸಲಾಗುವುದು ಎಂದರು. ಶ್ರೀ ಕೃಷ್ಣದೇವಾಲಯ ಸಮುಚ್ಚಯದಲ್ಲಿ  ಚಾಮುಂಡೆಶ್ವರಿ, ಕಾಶಿ ವಿಶ್ವೇಶ್ವರ ದೇವಾಲಯವೂ ಸೇರಿದಂತೆ ಗಣಪತಿ ಮತ್ತಿತರ ದೇವಾಲಯಗಳೂ ನಿರ್ಮಾಣವಾಗಲಿದೆ. ಪಾಕಶಾಲೆ, ಭೋಜನ ಶಾಲೆಯೂ ಸೇರಿದಂತೆ ವೇದ ಪಾಠಶಾಲೆ ನಿರ್ಮಾಗೊಳ್ಳಲಿದೆ. ಭಕ್ತರಿಗೆ ಉಚಿತ ವಸತಿ, ಅನ್ನದಾಸೋಹದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement