ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಶ್ವದ ಅತಿದೊಡ್ಡ ಶ್ರೀ ಕೃಷ್ಣದೇವಾಲಯ ನಿರ್ಮಾಣ

Rashmi Kasaragodu
Updated On : 23 Apr 2013, 11:41 am

ತೀರ್ಥಹಳ್ಳಿ: ಸಮೀಪದ ಚಕ್ಕೋಡಬೈಲಿನಲ್ಲಿ ವಿಶ್ವದ ಅತಿದೊಡ್ಡ ಶ್ರೀ ಕೃಷ್ಣದೇವಾಲಯ ನಿರ್ಮಿಸಲಾಗುವುದು ಎಂದು ಅಂತಾರಾಷ್ಟ್ರೀಯ ಶ್ರೀ ಕೃಷ್ಣ ಟೆಂಪಲ್ ಪೇಟೇಮಠ ಟ್ರಸ್ಟಿನ ಕಾರ್ಯಾಧ್ಯಕ್ಷ ಎಚ್. ಮಹಾರಾಜ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಪೇಟೆ ಮಠದಲ್ಲಿ ಈಗಾಗಲೇ ಇತಿಹಾಸ ಪ್ರಸಿದ್ಧ ಶಕ್ತಿಪೀಠದಲ್ಲಿ ಪುರಾತನ ಕಾಲದ ಚಾಮುಂಡೇಶ್ವರಿ ಕಾಶಿ ವಿಶ್ವೇಶ್ವರ ದೇವಸ್ಥಾನಗಳಿವೆ. ಕಾಶಿ ವಿಶ್ವೇಶ್ವರ ದೇವರ ಸನ್ನಿದಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದೆ. ಈ ಕ್ಷೇತ್ರ ಕಳೆದ 400 ವರ್ಷಗಳ ಕಾಲದಲ್ಲಿ ಒಂದಿಷ್ಟು ಅವನತಿಹೊಂದಿತ್ತಾದರೂ, ಇದೀಗ ಜೀರ್ಣೋದ್ಧಾರಗೊಂಡು  ಮರುಹುಟ್ಟು ಪಡೆದಿದೆ. ಸುಮಾರು 10 ಎಕರೆ ವಿಸ್ತಾರ ಸುಂದರ ಮಲೆನಾಡಿನ ಪರಿಸರದಲ್ಲಿ ಈ ಶಕ್ತಿ ಪೀಠವಿದ್ದು, ಇದೀಗ 2000ಕೋಟಿ ವೆಚ್ಚದಲ್ಲಿ ಭವ್ಯವಾದ ಶ್ರೀ ಕೃಷ್ಣದೇವಾಲಯ ನಿರ್ಮಿಸಲಾಗುವುದು. ನಿರ್ಮಾಣಕ್ಕೆ ಮಾರ್ಬಲ್ ಶಿಲೆ ಬಳಸಲಾಗುವುದು ಎಂದು ತಿಳಿಸಿದರು.
 ಈ ಕ್ಷೇತ್ರದ ಭಕ್ತರು ವಿಶ್ವದೆಲ್ಲೆಡೆ ಇದ್ದು, ನಿರ್ಮಾಣ ಕಾರ್ಯಕ್ಕೆ ನೆರವು ನೀಡಲಿದ್ದಾರೆ. ದೇಣಿಗೆ ಸ್ವೀಕರಿಸಲಾಗುವುದು ಎಂದರು.ಪೇಟೆ ಮಠ ಸಂಸ್ಥಾನ: ಕ್ರಿಸ್ತ ಪೂರ್ವದಲ್ಲಿ ತ್ರಿಶೂನಲಾಥ ಕ್ಷೇತ್ರವಾದ ಇದು ಪರತ್ತೂರ ಮಠ ಎಂದು ಖ್ಯಾತವಾಗಿತ್ತು. 14ನೇ ಶತಮಾನದಲ್ಲಿ ವಿಜಯನಗರ ಸಂಸ್ಥಾನದ ಹಂಪಿ ಪ್ರೌಢದೇವರಾಯನ ಮಂತ್ರಿ ಲಕ್ಕಣ್ಣ ದಂಕೇಶ ಈ ಸಂಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದೆ.
   ವಿಜಯನಗರದ ಅರಸರ ಕಾಲದಲ್ಲಿ ಇಲ್ಲಿ ವರ್ತಕರ ಕೇಂದ್ರವಾಗಿ ಪ್ರಸಿದ್ಧಿ ಪಡೆದ ಈ ಕ್ಷೇತ್ರ ರತ್ನ, ವಜ್ರವೈಢೂರ್ಯಗಳ ವ್ಯಾಪಾರ ಕೇಂದ್ರವಾಯಿತು. ಲಕ್ಕಣ್ಣ ದಂಕೇಶ ಶಿವತತ್ವ ಚಿಂತಾಮಣಿ ಗ್ರಂಥವನ್ನು ಇಲ್ಲಿ ಬರೆದಿದ್ದು ಎಂಬ ಉಲ್ಲೇಖವಿದೆ. ಪೇಟೆ ಮಠ ಸಂಸ್ಥಾನ ಮಾಂಡಲಿಕ ಬೆಳ್ಳಿಮನೆ ವಂಶಸ್ಥರಿಂದ ಇದೀಗ  ಪೇಟೆಮಠ ಟ್ರಸ್ಟಿಗೆ ಬಂದಿದ್ದು, ಇದೀಗ ಡಾ.ಬಿ.ಸಿ. ಧರ್ಮಸಾಯಿ ಈ ಟ್ರಸ್ಟಿನ ಅಧ್ಯಕ್ಷ ರಾಗಿದ್ದು, ಎಚ್. ಮಹಾರಾಜಗಾಂಧಿಯವರು ಕಾರ್ಯಾಧ್ಯಕ್ಷರಾಗಿದ್ದಾರೆ. ಮಾಹಿತಿಗೆ ಮೊ.ನಂ.9945873081,  944223148  ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement