ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡದ ಬಿಜೆಪಿ: ಶ್ರೀಕಾಂತ್

Rashmi Kasaragodu
Updated On : 23 Apr 2013, 11:39 am

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಏ.22
ಕಳೆದ 20 ವರ್ಷಗಳಿಂದ ಗೆದ್ದ ಮಹಾನುಭಾವರು ಟಿಪ್ಪು ನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆಮಾಡಿಲ್ಲ. ಎಲ್ಲೆಡೆ ಕೊಳಚೆ ಪ್ರದೇಶಗಳು ತಾಂಡವವಾಡುತ್ತಿದೆ ಎಂದು ಡಿಸಿಎಂ ಹಾಗೂ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಶ್ರೀಕಾಂತ್, ಬಿಜೆಪಿಯ ಅಭಿವೃದ್ಧಿ ಎಂದರೆ ಅದು ಅವರವರ ವೈಯಕ್ತಿಕ ಅಭಿವೃದ್ಧಿ ಎಂದ ಅವರು, ಇಂದಿಗೂ ಬಡವರು, ಕೊಳಚೆ ಪ್ರದೇಶದ ಜನರು ನಿರ್ಗತಿಕರಾಗಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಯಾರ ಅಭಿವೃದ್ಧಿಯಾಗಿದೆ ಎಂದು ಮತದಾರನಿಗೆ ಗೊತ್ತಿದೆ ಎಂದರು.
ಬಿಜೆಪಿ ದುರಾಡಳಿತ: ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಮತದಾರರು ರೋಸಿಹೋಗಿದ್ದು, ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದು, ಜೆಡಿಎಸ್ ಪರವಾದ ಅಲೆ ಹೆಚ್ಚಿದೆ ಎಂದ ಅವರು, ನನ್ನ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿಯೂ, ಈ ಹಿಂದೆ ಹೊನ್ನಾಳಿಯಲ್ಲಿ ಸ್ಪರ್ಧಿಸುತ್ತಾರೆಂದು ಅಪಪ್ರಚಾರ ಮಾಡಿದ್ದರು. ನಾನು ಶಿವಮೊಗ್ಗದಿಂದಲೇ ಸ್ಪರ್ಧಿಸಿದ್ದೇನೆ, ಇಲ್ಲೇ ಗೆದ್ದು ತೋರಿಸುತ್ತೇನೆಂದು ಹೇಳಿದರು.
ಬೆಂಬಲ: ಶಿವಮೊಗ್ಗ ಕ್ಷೇತ್ರದ ಎಲ್ಲಾ ಸಮಾಜದ ಮುಖಂಡರು ಪ್ರೋತ್ಸಾಹ ನೀಡುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ನಾಯಕತ್ವಕ್ಕೆ ಸರ್ವರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಣದಲ್ಲಿದ್ದ ಬಿಎಸ್ಆರ್ ಅಭ್ಯರ್ಥಿ ಜೆಡಿಎಸ್ಗೆ ಬೆಂಬಲ ವ್ಯಕ್ತಪಡಿಸಿ ಕಣದಿಂದ ಹಿಂದೆ ಸರಿದಿದ್ದಾರೆ ಎಂದರು.
ಏಪ್ರಿಲ್ 25 ಅಥವಾ 26ರಂದು ಶಿವಮೊಗ್ಗಕ್ಕೆ ಎಚ್.ಡಿ. ಕುಮಾರಸ್ವಾಮಿ, ದೇವೇಗೌಡ, ಜಮೀರ್ ಅಹ್ಮದ್ ಸೇರಿದಂತೆ ಮುಖಂಡರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾವೇಶ ಏರ್ಪಡಿಸಲಾಗುತ್ತದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಷಡಾಕ್ಷರಿ, ನಾಗಪ್ಪ, ಶ್ರೀನಿವಾಸ್, ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement