ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

10 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

Rashmi Kasaragodu
Updated On : 24 Apr 2013, 11:19 am

ಭದ್ರಾವತಿ: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ಹತ್ತು ಲಕ್ಷ ರು.ಗಳ ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ಹಾಸನದಿಂದ ಬಾಗಲಕೋಟೆಗೆ ಹೋಗಬೇಕಾಗಿದ್ದ ಕ್ಯಾಂಟರ್ ಲಾರಿಯೊಂದು 550 ವಿಸ್ಕಿ ತುಂಬಿದ ಬಾಟಲ್ಗಳಿರುವ ಬಾಕ್ಸ್ಗಳನ್ನು ಹೊತ್ತು ಪಟ್ಟಣದ ಹೊರವಲಯದಲ್ಲಿರುವ ಜೇಡಿಕಟ್ಟೆಯ ಬಳಿ ಹೋಗುತ್ತಿರುವಾಗ ದಾಳಿ ನಡೆಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿಪುಲ್ ಬನ್ಸಾಲ್ ಅವರ ನಿರ್ದೇಶನದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಪಾಟೀಲ್ ಹಾಗೂ ಅಬಕಾರಿ ವೃತ್ತ ನಿರೀಕ್ಷಕ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಧರಣಿಕುಮಾರ್ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸಿ ವಾಹನವನ್ನು ತಡೆದು ತಪಾಸಣೆ ನಡೆಸಿ ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಕ್ಯಾಂಟರ್ ಚಾಲಕ ಮಡಿವಾಳಪ್ಪ ಮತ್ತು ಕಂಡಕ್ಟರ್ ಜಟ್ಟಪ್ಪ ಅವರನ್ನು ಬಂಧಿಸಿ 10 ಲಕ್ಷ ಮೌಲ್ಯದ ಮದ್ಯ ಹಾಗೂ 8 ಲಕ್ಷ ರು.ಗಳ ಬೆಲೆಬಾಳುವ ಕ್ಯಾಂಟರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
48 ಬಾಟಲ್ ವಶ: ಅದೇ ರೀತಿ ಆನವೇರಿಯಲ್ಲಿ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 48 ಬಾಟಲ್ ಮದ್ಯವನ್ನು ಸಾಗಿಸುತ್ತಿದ್ದ ಸಿ. ಸುಧಾಕರ್ ಎಂಬಾತನನ್ನು ಅಬಕಾರಿ ಇನ್ಸ್ಪೆಕ್ಟರ್ ಧರಣಿಕುಮಾರ್ ಹಾಗೂ ಹಿರಿಯ ಅಬಕಾರಿ ಅಧಿಕಾರಿ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿ ಬಂಧಿತನಿಂದ ಮದ್ಯ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
60 ಪ್ಯಾಕೆಟ್ ವಿಸ್ಕಿ ವಶ
ಸಾಗರ: ತಾಲೂಕಿನ ಕೆಳದಿ ರಸ್ತೆಯ ಅಕ್ಕಿಮನೆ ಸಮೀಪ ಬೈಕಿನಲ್ಲಿ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ 60 ಪ್ಯಾಕೆಟ್ ಮದ್ಯವನ್ನು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ಅಬಕಾರಿ ಇಲಾಖೆಯವರು ಗಸ್ತು ತಿರುಗುತ್ತಿದ್ದಾಗ ಬಜಾಜ್ ಡಿಸ್ಕವರಿ ಬೈಕಿನಲ್ಲಿ 60 ಪ್ಯಾಕೆಟ್ ಒರಿಜಿನಲ್ ಚಾಯ್ಸ್ ವಿಸ್ಕಿ  ಸಾಗಿಸಲಾಗುತ್ತಿತ್ತು. ಅನುಮಾನಗೊಂಡು ತಪಾಸಣೆ ಮಾಡಿದಾಗ ಅಕ್ರಮ ಮದ್ಯ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಬೈಕ್ ಸಹಿತ ಆರೋಪಿ ಆನಂದ ಬೆಳೆಯೂರು ಅವರನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯ ನೇತೃತ್ವವನ್ನು ಅಬಕಾರಿ ನಿರೀಕ್ಷಕ ಎಂ.ಸಿ. ಶಂಕರ್ ವಹಿಸಿದ್ದು, ಉಪ ನಿರೀಕ್ಷಕ ಅಣ್ಣಪ್ಪ, ಸಿಬ್ಬಂದಿಗಳಾದ ಶಿವಪ್ಪ, ರಾಮಾಂಜನೇಯ, ಚಾಲಕ ಭಾನುಪ್ರಕಾಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಮನೆಯಲ್ಲಿ ಕಳವು
ಶಿವಮೊಗ್ಗ: ಮನೆ ಬಾಗಿಲ ಇಂಟರ್ಲಾಕ್ ಮುರಿದು ಒಳ ಪ್ರವೇಶಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅಪಹರಿಸಿರುವ ಘಟನೆ ಗೋಪಾಳದ ಅನುಪಿನಕಟ್ಟೆ ರಸ್ತೆಯಲ್ಲಿ ನಡೆದಿದೆ.
 ಇಲ್ಲಿನ ಸತ್ಯನಾರಾಯಣ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಇವರ ಪತ್ನಿ ಹಾಗೂ ಸ್ನೇಹಿತ ನಾಗರಾಜರ ಪತ್ನಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಗರಕ್ಕೆ ಹೋಗಿದ್ದರು. ಈ ವೇಳೆ ಅಪರಿಚಿತರು ಮನೆಗೆ ನುಗ್ಗಿ 1 ಬಂಗಾರದ ನಕ್ಲೇಸ್,1 ಹವಳದ ನಕ್ಲೇಸ್ (30 ಗ್ರಾಂ), ಉಂಗುರ(20ಗ್ರಾಂ) ಹಾಗೂ 5 ಸಾವಿರ ರುಪಾಯಿ ನಗದನ್ನು ಕಳವು ಮಾಡಿದ್ದಾರೆ. ಇವುಗಳ ಮೌಲ್ಯ 2.5 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ: ಬಂಧನ
ತೀರ್ಥಹಳ್ಳಿ: ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಸಂಪೆಕಟ್ಟೆ ರಾಘು ಬಂಧಿತ ಆರೋಪಿ. ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಇಲ್ಲಿನ ತಾಲೂಕು ಕಚೇರಿ ಬಳಿ ದಾಳಿ ನಡೆಸಿದ್ದು, ಆಟೋರಿಕ್ಷಾದಲ್ಲಿದ್ದ ಮದ್ಯದ (ಬಿಯರ್) ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 1 ಲಕ್ಷ ಎಂದು ಅಂದಾಜಿಸಲಾಗಿದೆ.  ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ನೇತೃತ್ವದಲ್ಲಿ ಅಬಕಾರಿ ಸರ್ಕಲ್ ಇನ್ಸ್ಸ್ಪೆಕ್ಟರ್ ಹನುಮಂತಪ್ಪ, ಚಂದ್ರಪ್ಪ, ಮಡಿವಾಳಪ್ಪ, ವೆಂಕಟೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement