ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಉರೂಸ್

Rashmi Kasaragodu
Updated On : 24 Apr 2013, 11:18 am

ಶಿವಮೊಗ್ಗ: ಹಜರತ್ ಸಯದ್ ಷಾ ಅಲೀಮ್ ದಿವಾನ್ ಅಲೈ 25 ರಿಂದ 27ರವರೆಗೆ ಉರೂಸ್ ಸಮಾರಂಭವನ್ನು ಆಚರಿಸಲಿದೆ.
25ರಂದು ಗಂಧೋತ್ಸವದ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ತಿಲಕ್ ನಗರದ ಮುಖ್ಯರಸ್ತೆಯಿಂದ ಹೊರಟು ಮಹಾವೀರ ವೃತ್ತ, ಟ್ಯಾಂಕ್ ಮೊಹಲ್ಲಾ, ಪೆನ್ಷ್ನ್ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಕೆ.ಆರ್. ಪುರಂ, ಎಎ ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್, ಬಾಲರಾಜ್ ಅರಸ್ ರಸ್ತೆ ಮುಖಾಂತರ ಮೂಲಕ ದರ್ಗಾ ತಲುಪಲಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಗೆ ಪ್ರಸಾದ ವಿತರಣೆ ನೀಡಲಾಗುವುದು.  26 ಮತ್ತು 27ರಂದು ಉರೂಸ್ ಸಮಾರಂಭಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ದರ್ಗಾ ವಾಣಿಜ್ಯ ಸಂಕೀರ್ಣದ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಜನಾಬ್ ಬಿ.ಎ. ತಲ್ಖೀನ್ ಅಹಮದ್, ಕಮಿಟಿ ಅಧ್ಯಕ್ಷ ಟಿ. ಮೊಹಮದ್ ಗೌಸ್ ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement