ಮೇ 10ರಂದು ರಂಗಗೀತೆ ಶಿಬಿರ
ಶಿವಮೊಗ್ಗ: ಸಹ್ಯಾದ್ರಿ ರಂಗ ತರಂಗದ ರಜತ ಮಹೋತ್ಸವದ ವರ್ಷಾಚರಣೆ ಅಂಗವಾಗಿ ರಂಗ ಗೀತೆಗಳ ಕಲಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಹಾಡುಗಾರರು, ಗಾಯನದ ಕುರಿತು ಸಾಮಾನ್ಯ ಜ್ಞಾನ ಹೊಂದಿದವರು ಶಿಬಿರದಲ್ಲಿ ಭಾಗವಹಿಸಬಹುದು.
ಕನ್ನಡನಾಡಿನ ಅಮೂಲ್ಯವಾದ ಈ ರಂಗ ಗೀತೆಗಳ ಕಲೆಯನ್ನು ಉಳಿಸುವ ಬೆಳೆಸುವ ಉದ್ದೇಶವಿರುವ ಈ ಶಿಬಿರದಲ್ಲಿ ನಾಡಿನ ಖ್ಯಾತ ರಂಗ ಸಂಗೀತಗಾರರು ಬಾಗವಹಿಸಲಿದ್ದು ಕರ್ನಾಟಕಿ ಹಾಗು ಹಿಂದುಸ್ಥಾನಿ ಶೈಲಿಯಲ್ಲಿ ರಂಗಗೀತೆಗಳನ್ನು ಹೇಳಿಕೊಡಲಿದ್ದಾರೆ. ನಗರದ ಎಲ್ಲ ರಂಗ ತಂಡಗಳು ಇದರ ಸದುಪಯೋಗ ಪಡೆಯಲು ಕೋರಿದೆ. ಆಸಕ್ತರು ಏಪ್ರಿಲ್ 30ರೊಳಗೆ ಸಂಪರ್ಕಿಸಬಹುದು. ಮಾಹಿತಿಗೆ ಸಂಪರ್ಕಿಸಲು ಕಾರ್ಯದರ್ಶಿ ತಿಪ್ಪಣ್ಣ ಕೋರಿದ್ದಾರೆ. ಮೊ- 9448437985, 7259343522, 9449100837, 9448414752.