ಹೊಸೂಡಿ ಕೆಂಡಾರ್ಚನೆ ಮುಂದೂಡಿಕೆ
ಶಿವಮೊಗ್ಗ: ಏಪ್ರಿಲ್ 30ರಂದು ನಡೆಯಬೇಕಿದ್ದ ಹೊಸೂಡಿ ಶ್ರೀ ವೀರಭದ್ರೇಶ್ವರ ದೇವರ ಕೆಂಡಾರ್ಚನೆಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೇ 14ಕ್ಕೆ ಮುಂದೂಡಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯ ತಿಳಿಸಿದ್ದಾರೆ. ಕೆಂಡಾರ್ಚನೆ ಇದೊಂದು ವಾರ್ಷಿಕವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮ. ಚುನಾವಣಾ ಆಯೋಗಪೂಜೆ ಮಾಡಿಕೊಳ್ಳಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲು ಸೂಚಿಸಿದ್ದರರಿಂದ ಕಾರ್ಯಕ್ರಮವನ್ನು ಮೇ14ಕ್ಕೆ ಮುಂದೂಡಲಾಗಿದೆ ಎಂದಿದ್ದಾರೆ.