2 ಕಡೆ ಲಕ್ಷಾಂತರ ರು. ಮೌಲ್ಯದ ಮದ್ಯ ವಶ
ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಸಿಬ್ಬಂದಿ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆಗಸ್ತು ನಡೆಸುವಾಗ ಏಪ್ರಿಲ್ 23ರಂದು ರಾತ್ರಿ 10.15ರ ಸಮಯ, ನಗರದ ಬಿ.ಎಚ್. ರಸ್ತೆಯ ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಗೇಟ್‌ನ ಮುಂಭಾಗದಲ್ಲಿ ಹೊನ್ನವಿಲೆಯ ಬಿ. ನಂಜಪ್ಪ ಎಂಬಾತ 25.74 ಲೀಟರ್ ಮದ್ಯವನ್ನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆಹಚ್ಚಲಾಯಿತು.
ಆತನನ್ನು ವಿಚಾರಣೆಗೊಳಪಡಿಸಿ ವಾಹನ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ ಮದ್ಯ ಹಾಗೂ ದ್ವಿಚಕ್ರ ವಾಹನದ ಒಟ್ಟು ಮೌಲ್ಯ 45 ಸಾವಿರವಾಗಿದೆ.
ಶಿವಮೊಗ್ಗ ಉಪ ವಿಭಾಗ ಅಬಕಾರಿ ಉಪ ನಿರೀಕ್ಷಕ ಆರ್. ಲೋಕೇಶಪ್ಪ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.
ಅಬಕಾರಿ ಉಪ ಅಧೀಕ್ಷಕ ಎಚ್.ಓ. ಮುರಳೀಧರ್ ನೇತೃತ್ವದಲ್ಲಿ ರಸ್ತೆಗಾವಲು ಹಾಗೂ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ ಉಪ ನಿರೀಕ್ಷಕ ಲೋಕೇಶಪ್ಪ ಮತ್ತು ಸಿಬ್ಬಂದಿ ರವೀಂದ್ರ ಪಾಟೀಲ್, ಕುಮಾರ್, ಅಬಕಾರಿ ರಕ್ಷಕರು ಹಾಗೂ ವಾಹನ ಚಾಲಕ ಮಂಜೇಶ್ರ್‌ವರು ಭಾಗವಹಿಸಿದ್ದರು.