28ರಿಂದ ನಾಟಕ ಪ್ರದರ್ಶನ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.24
ಶಿವಮೊಗ್ಗ ರಂಗಾಯಣವು ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪವು ಏಪ್ರಿಲ್ 28ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಜೊತೆಗೆ ಮೂರು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯುವುದು.
28ರಂದು ಕಲಾವಿದ ಬಿ. ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಭದ್ರಪ್ಪ ಶಿ. ಹೆನ್ಲಿರವರ ರಚನೆ, ಸಂತೋಷ್ ಗಡ್ಡಿಯಂಗಡಿಯವರ ನಿರ್ದೇಶನದಲ್ಲಿ ನಮ್ಮ ಧರಣಿ ಎಂಬ ನಾಟಕ ಪ್ರಸ್ತುತಗೊಳಿಸಲಾಗುತ್ತಿದೆ. ಏಪ್ರಿಲ್ 29ರಂದು ಹಾಸ್ಯ ಸಾಹಿತಿ, ನಾಟಕಕಾರ ದುಂಡಿರಾಜ್ ಅರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಎಸ್. ಮಾಲತಿಯವರ ರಚನೆ, ಪ್ರವೀಣ್ ಎಸ್. ಹಾಲ್ಮತ್ತೂರು ನಿರ್ದೇಶನದ ಮಾಯಾಬಜಾರ್ ನಾಟಕವನ್ನು ಮಕ್ಕಳು ಪ್ರಸ್ತುತಪಡಿಸುವರು.
ಏಪ್ರಿಲ್ 30ರಂದು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸುರೇಶ್ ಆನಗಳ್ಳಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಹೊ.ನ. ಸತ್ಯರವರ ರಚನೆ ಮತ್ತು ಸಂಗೀತ, ಅಜಯ್ಗೌಡ ನೀನಾಸಂರ ನಿರ್ದೇಶನದ ಬೆನವಾ ಎಲ್ಲಿರುವೆ ಎಂಬ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರತಿದಿನ 6.30ಕ್ಕೆ ನಡೆಯಲಿದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳಾದ ಎನ್. ಹರಿಕುಮಾರ್ರವರು ತಿಳಿಸಿದ್ದಾರೆ.