ಅಕ್ರಮ ಮದ್ಯ ವಶ
ಶಿವಮೊಗ್ಗ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಬುಧವಾರ ಸೋಮಿನಕೊಪ್ಪ ರಸ್ತೆ ಬಳಿ ನಡೆದಿದೆ. ಎಂ.ಎಸ್. ಸಂತೋಷ್ ಬಂಧಿತ ಆರೋಪಿ. ಇವರು ಬುಧವಾರ ಬೆಳಿಗ್ಗೆ 10.30ಕ್ಕೆ ನಗರದ ಸೋಮಿನಕೊಪ್ಪದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ 25.920 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಸಂತೋಷ್ ಅವರನ್ನು ಬಂಧಿಸಲಾಗಿದೆ. ಇದರ ಮೌಲ್ಯ ಸುಮಾರು 1,57,500 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಕೆ.ಎಸ್. ರಾಜಶೇಖರ್, ಉಪ ಆಯುಕ್ತ ರಾಜೇಂದ್ರ ಪ್ರಸಾದ್, ಉಪ ಅಧೀಕ್ಷಕ ಪವಾರ್, ವೇಣುಗೋಪಾಲ ಮತ್ತು ಚರಣ್ರಾಜ್, ಮಧುಸೂದನ್, ಅನಂತಕುಮಾರ್, ಸುಧಾಮಣಿ, ವಾಗೀಶ್ ಮತ್ತಿತರರು ಇದ್ದರು.